Latest

ಮಹಾದೇವ ಬಿರಾದಾರಗೆ ‘ಶಿವಯೋಗಿ ಸಿರಿ’ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಅಥಣಿ

ಅಥಣಿ ತಾಲೂಕಿನ ಚಮಕೇರಿಯ ಮಹಾದೇವ ಬಿರಾದಾರ ರಾಮದುರ್ಗ ತಾಲೂಕು ಬಾಗೋಜಿಕೊಪ್ಪ ಶ್ರೀ ಗುರುವರೇಣ್ಯ ಗ್ರಾಮೀಣ ವಿದ್ಯಾಪೀಠ ಹಾಗೂ ಶಿವಯೋಗೀಶ್ವರ ಹಿರೇಮಠ ದಿಂದ ಕೊಡಮಾಡುವ 2018ರ ಸಾಲಿನ ‘ಶಿವಯೋಗಿ ಸಿರಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿ, ಶಾಲು, ಸ್ಮರಣಿಕೆ, ಗೌರವಧನದೊಂದಿಗೆ ಇದೇ ಏಪ್ರಿಲ್ 19ರಂದು ನಡೆಯುವ ಶ್ರೀಮದಥಣಿ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಹಾಗೂ ಹಿರೇಮಠ ಗುರುಲಿಂಗ ಮಹಾಸ್ವಾಮಿಗಳವರ ಪುಣ್ಯ ಸ್ಮರಣೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button