ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಕಳೆದ ಹಲವು ದಿನಗಳಿಂದ ಕೈ ಗೆ ಸಿಗದ ಶಾಸಕರಿಬ್ಬರಿಗೆ ಕಾಂಗ್ರೆಸ್ ಅಂತಿಮ ನೋಟೀಸ್ ಜಾರಿಮಾಡಿದೆ.
ಶಾಸಕರಾದ ಮಹೇಶ್ ಕುಮಠಳ್ಳಿ ಮತ್ತು ಜಿ.ಎನ್.ಗಣೇಶ್ ಅವರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೋಟೀಸ್ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ನಡೆಯಲಿರುವ ಶಾಸಕಾಂಗ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ, ತಪ್ಪಿದರೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವಿಶೇಷವೆಂದರೆ, ಇವರೆಲ್ಲರ ನಾಯಕ ರಮೇಶ ಜಾರಕಿಹೊಳಿ ಬಗ್ಗೆ ಮಾತ್ರ ಕಾಂಗ್ರೆ ಇನ್ನೂ ಕ್ರಮಕ್ಕೆ ಮುಂದಾಗಿಲ್ಲ. ಜೊತೆಗೆ ಉಮೇಶ್ ಜಾಧವ ಅವರಿಗೂ ಇಂತಹ ಕ್ರಮವಾಗಿಲ್ಲ.
ಶುಕ್ರವಾರ ಈಗಿನ ಎಲ್ಲ ರಾಜಕೀಯ ಗೊಂದಲಗಳು ಮತ್ತೊಂದು ತಿರುವು ಪಡೆಯುವುದು ಖಚಿತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ