Belagavi NewsBelgaum NewsKannada NewsKarnataka News

ಮುಂದುವರೆದ ಮಳೆ ಆರ್ಭಟ: ಹೊಳೆಯಂತಾದ ರಸ್ತೆಗಳು

ಪ್ರಗತಿವಾಹಿನಿ ಸುದ್ದಿ : ಬೈಲಹೊಂಗಲ ಪಟ್ಟಣದಲ್ಲಿ ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಯ ಪರಿಣಾಮ  ರಾಯಣ್ಣ ವೃತ್ತದಲ್ಲಿ  ರಸ್ತೆಯ ತುಂಬೆಲ್ಲಾ ನೀರು ಹರಿದು, ಸಂಚಾರಕ್ಕೆ ಅಡಚಣೆ ಉಂಟಾಯಿತು. 

ಶುಕ್ರವಾರ ಕೂಡ ಮಳೆ ಆರ್ಭಟ ಮುಂದುವರೆದಿದ್ದು ರಸ್ತೆಗಳ ಮೇಲೆ  ಹೊಳೆಯಂತೆ  ನೀರು ರಭಸದಿಂದ ಹರಿದು ವಾಹನ ಸವಾರರು ಪರದಾಡಿದರು. ಕೆಲಕಾಲ ಟ್ರಾಪೀಕ್ ಸಮಸ್ಯೆ ಉಂಟಾಯಿತು. ಮೊಣಕಾಲವರೆಗೂ ನೀರು ಬಂದಿದ್ದರಿಂದ ಕೆಲ ಅಂಗಡಿಗಳಲ್ಲಿ ನುಗ್ಗಿದ್ದ ಪರಿಣಾಮ ಅಂಗಡಿಕಾರರು ನೀರು ಹೊರ ಹಾಕಲು ಹರಸಾಹಸ ಪಟ್ಟರು. 

ಶ್ರೀನಗರದಲ್ಲಿ ಸುಮಾರು ಆರೇಳು ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಯಿತು. ದೀಪಾ ಹೊಟೇಲ ಪಕ್ಕದ ರಸ್ತೆ , ಬಸ್ ನಿಲ್ದಾಣ,  ಹಿಂಬಾಗ,  ಸಂಗೊಳ್ಳಿ ರಾಯಣ್ಣ ವೃತ್ತ, ಸಾಯಿಬಾಬಾ ಮಂದಿರ ರಸ್ತೆ, ದೊಡ್ಡಕೆರೆಯ ರಸ್ತೆ, ಹೊಸೂರ ರಸ್ತೆ  ಮುಖ್ಯರಸ್ತೆಗಳು ಮಳೆ ನೀರಿನಿಂದ ಕೆರೆಯಂತೆ ಕಂಡವು. ಪಟ್ಟಣದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ಒಟ್ಟಿನಲ್ಲಿ ಜನಜೀವನ ಅಸ್ತವ್ಯಸ್ತವಾಯಿತು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button