Latest

ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಬೆಂಕಿ; ಮೂರೂ ಅಂತಸ್ಥಿಗೆ ಆವರಿಸಿರುವ ಕೆನ್ನಾಲಿಗೆ

ಪ್ರಗತಿವಾಹಿನಿ ಸುದ್ದಿ, ಕಾರವಾರ – ಇಲ್ಲಿಯ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಜಿಲ್ಲಾ ಪಂಚಾಯಿತಿಯ ಕಟ್ಟಡದ ಹಿಂಬಾಗದಲ್ಲಿರುವ ಅಭಿಲೇಖಾಲಯ ಕಟ್ಟಡದಲ್ಲಿ ಶನಿವಾರ ಬೆಳಗ್ಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ.

ಕಟ್ಟಡದ ಮೂರೂ ಅಂತಸ್ಥಿನಲ್ಲಿ ಬೆಂಕಿ ಆವರಿಸಿಕೊಂಡಿದ್ದು, ಆರಿಸಲು ಪ್ರಯತ್ನ ನಡೆದಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ನಡೆಸಿದ್ದಾರೆ.

ಮಹ್ತವದ ದಾಖಲೆಗಳೂ ಬೆಂಕಿಗೆ ಆಹುತಿಯಾಗಿರುವ ಆತಂಕ ಉಂಟಾಗಿದೆ. ಆದರೆ ಯಾವುದೆ ಪ್ರಾಣಾಪಾಯವಾಗಿಲ್ಲ.

Home add -Advt

ಜಿಲ್ಲಾ ಪಂಚಾಯಿತಿ ಸಿಇಒ ಪ್ರಿಯಾಂಗಾ ಎಂ, ಡಿಸಿ ಮುಲ್ಲೈ ಮುಗಿಲನ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

ಸಿಬ್ಬಂದಿ ಎಡವಟ್ಟು; ಪಾಲಿಕೆ ಸದಸ್ಯರ ಖಾತೆಗೆ ಲಕ್ಷಾಂತರ ರೂ.ಜಮೆ

Related Articles

Back to top button