Latest

ಮೆಟ್ರೋ ಸಂಪೂರ್ಣ ಲೈನ್‌ ಪರಿಶೀಲಿಸಲು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೂಚನೆ

*

Home add -Advt

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಟ್ರಿನಿಟ್‌ ನಿಲ್ದಾಣದ ಬಳಿ ಪಿಲ್ಲರ್‌ ಬಿರುಕು ಬಿಟ್ಟಿರುವುದನ್ನು ಪರಿಶೀಲಿಸಲು ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಹಲಸೂರು ಮೆಟ್ರೋ ನಿಲ್ದಾಣದವರೆಗೆ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೆಡಶ್ವರ್‌ ಅವರು ಮೆಟ್ರೋ ರೈಲು ಮೂಲಕ ಸಂಚರಿಸಿ, ವೀಕ್ಷಿಸಿದರು.

ಬಳಿಕ ಟ್ರಿನಿಟಿ‌ ಸರ್ಕ‌ಲ್‌ಗೆ ಆಗಮಿಸಿದ ಅವರು, ಬಿರುಕು ಬಿಟ್ಟಿರುವ ಪಿಲ್ಲರ್‌ ನನ್ನು ವೀಕ್ಷಣೆ ಮಾಡಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪಿಲ್ಲರ್‌ ಬಿರುಕು ಬಿಟ್ಟಿರುವುದನ್ನು ಈಗಾಗಲೇ ದೆಹಲಿಯಿಂದ ತಜ್ಞರು ಹಾಗೂ ನಮ್ಮ‌ ತಾಂತ್ರಿಕ ತಂಡ ಪರಿಶೀಲಿಸಿ, ರಿಪೇರಿ ಕೆಲಸ ಪ್ರಾರಂಭಿಸಿದೆ.

ಪಿಲ್ಲರ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಪಿಲ್ಲರ್‌ ಮೇಲೆ ಕೂರಿಸುವಾಗ ಸ್ಪೇರಿಂಗ್ ಹಾಕಿ ಕೂರಿಸಲಾಗುತ್ತದೆ. ಆ ಸ್ಪೇರಿಂಗ್‌ ಸ್ವಲ್ಪ ಪ್ರಮಾಣದಲ್ಲಿ ಜರುಗಿದೆ. ಯಾವುದೇ ತೊಂದರೆ ಇಲ್ಲ. ಇದರಿಂದ ಜನಸಾಮಾನ್ಯರು ಆತಂಕಕ್ಕೆ ಒಳಗಾಗಬೇಕಿಲ್ಲ. ಈ ದೃಷ್ಟಿಯಿಂದಲೇ ನಾನು ಜನರೊಂದಿಗೆ ಮೆ್ಟಟ್ರೋ ರೈಲಿನಲ್ಲಿ ಸಂಚರಿಸಿದೆ.

ಈ ಬಿರುಕಿನಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ಹೀಗಾಗಿ ಇಡೀ ಮೆಟ್ರೋ ಲೈನ್‌ನನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

Related Articles

Back to top button