Latest

ಮೋದಿಗೆ ನೀಡುವ ಮತವೇ ನೀವು ನೀಡುವ ಉಡುಗೊರೆ! -ವೈರಲ್ ಆಯ್ತು ವಿವಾಹ ಆಮಂತ್ರಣ

 

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮೋದಿಗೆ ನೀಡುವ ಮತವೇ ನೀವು ನೀಡುವ ಉಡುಗೊರೆ!

Home add -Advt

ಇದು ಬಿಜೆಪಿಯ ಚುನಾವಣೆ ಪ್ರಚಾರದ ವಾಕ್ಯವಲ್ಲ, ಬದಲಾಗಿ ದಾವಣಗೆರೆಯಲ್ಲಿ ಫೆಬ್ರವರಿ 8ರಂದು ನಡೆಯಲಿರುವ ವಿವಾಹವೊಂದರ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲ್ಪಟ್ಟ ವಾಕ್ಯ!

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹೊಸಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರ ಮನೆಯಲ್ಲಿ ನಡೆಯಲಿರುವ ವಿವಾಹ ಆಮಂತ್ರಣ ಪತ್ರಿಕೆ ಇದು. ಶೋಭ ಮತ್ತು ಶಿವಕುಮಾರ ಆಮಂತ್ರಣ ಅವರು ತಮ್ಮ ಮಗ ನಾಗರಾಜ ಅವರ ವಿವಾಹವನ್ನು ರೇಖಾ ಎನ್ನುವವರೊಂದಿಗೆ  ನಡೆಸುತ್ತಿದ್ದಾರೆ. 

ಅದರಲ್ಲಿ ನೂತನ ವಧು-ವರರ ಫೋಟೋ ಹಾಕಿಲ್ಲ. ಬದಲಾಗಿ ನರೇಂದ್ರ ಮೋದಿ ಅವರ ಚಿತ್ರ ಪ್ರಕಟಿಸಿದ್ದಾರೆ. 2019ರ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ನೀಡುವ ಮತವೇ ನೀವು ನೀಡುವ ಉಡುಗೊರೆ ಎಂದು ಮುದ್ರಿಸಿದ್ದಾರೆ.

ಜೊತೆಗೆ ಸ್ವಚ್ಛ ಭಾರತ  ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ ಎನ್ನುವ ಸ್ಲೋಗನ್ ನ್ನು ಸಹ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದ್ದಾರೆ. 

ಈ ಆಮಂತ್ರಣ ಪತ್ರಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Related Articles

Back to top button