Latest

 ರಸ್ತೆ ನಿರ್ಮಾಣಕ್ಕೆ 10 ಲಕ್ಷ ರೂ  ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಧರ್ಮಟ್ಟಿ ಗ್ರಾಮದಿಂದ ಮೂಡಲಗಿ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ತಾ.ಪಂ ಮಾಜಿ ಸದಸ್ಯ ಭೀಮಪ್ಪ ಪೂಜೇರಿ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. 

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:

ಧರ್ಮಟ್ಟಿ ಗ್ರಾಮದಿಂದ ಮೂಡಲಗಿ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಮಂಗಳವಾರದಂದು ತಾ.ಪಂ ಮಾಜಿ ಸದಸ್ಯ ಭೀಮಪ್ಪ ಪೂಜೇರಿ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಧರ್ಮಟ್ಟಿ ಗ್ರಾಮದಿಂದ ಮೂಡಲಗಿ ವರೆಗಿನ ೬ ಕಿ.ಮಿ. ರಸ್ತೆಯು ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಯನ್ನು ಗಮನಿಸಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸ್ವಂತ ಹಣ ೧೦ ಲಕ್ಷ ರೂಗಳನ್ನು ರಸ್ತೆ ಕಾಮಗಾರಿಗೆ ನೀಡಿದ್ದಾರೆ. ಧರ್ಮಟ್ಟಿ ಗ್ರಾಮಸ್ಥರ ಪರವಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

 ಬಾಲಚಂದ್ರ ಜಾರಕಿಹೊಳಿ ಅವರು ಧರ್ಮಟ್ಟಿ ಗ್ರಾಮದ ಅಭಿವೃದ್ದಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.  ಎಲ್ಲ ಸಮಾಜಗಳ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು   ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಮುಖಂಡ ಲಕ್ಷ್ಮಣ ತೆಳಗಡೆ, ಪಿಕೆಪಿಎಸ್ ಅಧ್ಯಕ್ಷ ಪರಸಪ್ಪ ಸನದಿ, ಮೂಡಲಗಿ ಪುರಸಭೆ ಮಾಜಿ ಸದಸ್ಯರಾದ ರಮೇಶ ಸಣ್ಣಕ್ಕಿ, ಮರೆಪ್ಪ ಮರೆಪ್ಪಗೋಳ, ಪ್ರಮುಖರಾದ ಲಕ್ಕಪ್ಪ ತೆಳಗಡೆ, ಸಿದ್ದಯ್ಯ ಹಿರೇಮಠ, ಬನಪ್ಪ ಕೊರಕಪೂಜೇರಿ, ಲಕ್ಕಪ್ಪ ಧರ್ಮಣ್ಣಗೋಳ, ಲಗಮಣ್ಣ ಕುಟ್ರಿ, ನಿಂಗಪ್ಪ ಹಾರುಗೊಪ್ಪ, ಪುಂಡಲೀಕ ಮಾದರ, ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button