Latest

ರಾತ್ರಿ ವೇಳೆ ಬಲಾತ್ಕಾರವಾಗಿ ಸುಲಿಗೆ ಮಾಡುತ್ತಿದ್ದ ಮೂವರ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ರಾತ್ರಿ ವೇಳೆ ಬಲಾತ್ಕಾರವಾಗಿ ಸುಲಿಗೆ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಮಾಳಮಾರುತಿ ಠಾಣೆ ಪೊಲೀಸರು, ಮೊಟಾರ್ ಸೈಕಲ್, ಮೊಬೈಲ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಎಸಿಪಿ ನಾರಾಯಣ ಬರಮನಿ ಹಾಗೂ ಮಾಳಮಾರುತಿ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಬಿ.ಆರ್.ಗಡ್ಡೇಕರ್ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತಂಡ ಈ ಕಾರ್ಯಾಚರಣೆ ನಡೆಯಿತು.

ಬಿ.ಕೆ.ಕಂಗ್ರಳಿ ಶಾಸ್ತ್ರಿ ನಗರದ ಮಹೇಶ ಸಿದ್ರಾಮ ಸುಂಕದ (20), ಕಂಗ್ರಾಳಿ ಸಂತಾಜಿ ಗಲ್ಲಿಯ  ವಿವೇಕ ಕರೆಪ್ಪ ನಾಯಕ (23) ಹಾಗೂ ಶಾಸ್ತ್ರಿನಗರದ ಕಾರ್ತಿಕ ಜ್ಯೋತಿಬಾ ಪಾಟಿೀಲ (19) ಬಂಧಿತರು.

Home add -Advt

ಇವರು ಕೆಎಲ್ಇ ರಸ್ತೆ, ಅಶೋಕ ನಗರ, ನೆಹರು ನಗರ ಮತ್ತಿತರ ಕಡೆ ಬಲಾತ್ಕಾರವಾಗಿ ಜಗಳ ತೆಗೆದು ಸುಲಿಗೆ ಮಾಡು ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಜಾಕ್ ಹಸನ್ ಸಾಬ್ ಲಾಜಖಾನ್ ಎನ್ನುವವರು ನೀಡಿದ ದೂರಿನ ಮೇಲೆ ಕ್ರಮ ತೆಗೆದುಕೊಂಡ ಪೊಲೀಸರು ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

Related Articles

Back to top button