ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
3 ಟ್ರ್ಯಾಕ್ಟರ್ ಗಳಲ್ಲಿ ಅಕ್ರಮವಾಗಿ ಕಟ್ಟಿಗೆ ಸಾಗಿಸುತ್ತಿದ್ದ ಮೂವರನ್ನು ಗೋಕಾಕ ತಾಲೂಕು ಕೊಳವಿ ಬಳಿ ಅರಣ್ಯ ಸಂಚಾರ ದಳ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಮಾವು ಹಾಗೂ ಬೇವಿನ ದೊಡ್ಡ ತುಂಡುಗಳನ್ನು ಸಾಗಿಸಲಾಗುತ್ತಿತ್ತು. ಪಿಎಸ್ಐ ಕೆ.ಎಸ್. ಕೋಚರಿ ಹಾಗೂ ಸಿಬ್ಬಂದಿಯಾದ ಆರ್.ಬಿ.ಯರನಾಳ, ಎಸ್.ಆರ್.ಬಗಾಯ್ ಕಾರ್ಯಾಚರಣೆ ನಡೆಸಿದರು.
ಮರಕುಂಬಿಯ ಮಲ್ಲಿಕಜಾನ್ ನಬಿಸಾಬ್ ಕಡಗುಂಟಿ, ಮಮದಾಪುರದ ಪುಂಡಲೀಕ ಅಪ್ಪಯ್ಯ ಹಂಜಿ ಹಾಗೂ ಜಮನಾಳದ ಸೋಮಪ್ಪ ಯಲ್ಲಪ್ಪ ಪೂಜಾರಿ ಬಂಧಿತರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ