ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕೆಎಲ್ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಜೆಎನ್ಎಂಸಿ ಸೈಂಟಿಫಿಕ್ ಸೊಸೈಟಿಯ ೩೭ನೇ ವಾರ್ಷಿಕ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವು ಏ.೭ ರಂದು ಬೆಳಗ್ಗೆ ೯ ರಿಂದ ಸಂಜೆ ೬.೩೦ರ ವರೆಗೆ ನಗರದ ಕೆಎಲ್ಇ ಸೆಂಟಿನರಿ ಕನ್ವೆನ್ಶನ್ (ಬಿ.ಎಸ್. ಜೀರಗೆ ಸಭಾಭವನ) ಸೆಂಟರ್ ನಲ್ಲಿ ನಡೆಯಲಿದೆ.
ಚಿಕ್ಕಮಕ್ಕಳಲ್ಲಿನ ಕ್ಯಾನ್ಸರ್, ಪ್ರೊಸ್ಟೇಟ್ (ವೃಷಣ ಗ್ರಂಥಿ), ಸ್ತನ, ಬ್ಲಡ್, ಗಂಟಲು ಕ್ಯಾನ್ಸರ್ ಹಾಗೂ ಗಡ್ಡೆಗಳ ನಿರ್ವಹಣೆ ಕುರಿತು ನುರಿತ ತಜ್ಞವೈದ್ಯರು ಉಪನ್ಯಾಸ ನೀಡಲಿದ್ದಾರೆ. ರೊಬೊಟಿಕ್ ತಂತ್ರಜ್ಞಾನ ಕುರಿತು ವೈಜ್ಞಾನಿಕ ಚರ್ಚೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ನವದೆಹಲಿಯ ನ್ಯಾಶನಲ್ ಬೋರ್ಡ ಆಫ್ ಎಕ್ಸಾಮಿನೇಷನ್ನ ಡಾ. ಅಭಿಜೀತ ಶೇಟ್, ಗೌರವ ಅತಿಥಿಗಳಾಗಿ ಬೆಂಗಳೂರಿನ ಹಿರಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ. ಕೆ.ಎಸ್. ಗೋಪಿನಾಥ, ಕೆಎಲ್ಇ ಅಕಾಡೆಮಿ ಹೈಯರ್ ಎಜ್ಯುಕೇಶನ್ ಮತ್ತು ರಿಸರ್ಚ್ ಕುಲಪತಿ ಡಾ. ವಿವೇಕ ಸಾವೋಜಿ, ಕುಲಸಚಿವ ಡಾ. ವಿ.ಡಿ. ಪಾಟೀಲ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ ಭಾಗವಹಿಸಲಿದ್ದು, ಡಾ. ಎನ್.ಎಸ್. ಮಹಾಂತಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಘಟನಾ ಕಾರ್ಯಾಧ್ಯಕ್ಷ ಡಾ. ಆರ್.ಬಿ. ನೇರಲಿ, ಡಾ. ವಿ.ಎ. ಕೋಟಿವಾಲೆ, ಡಾ. ರೇಷ್ಮಾ ಕರಿಶೆಟ್ಟಿ, ಡಾ. ಶಮಾ ಬೆಲ್ಲದ, ಡಾ. ಆರ್.ಎಸ್. ಮುಧೋಳ, ಡಾ. ಕುಮಾರ ವಿಂಚುರಕರ, ಡಾ. ಶಿವಗೌಡಾ ಪಾಟೀಲ, ಡಾ. ಎ.ಪಿ. ಹೊಗಾಡೆ ಉಪಸ್ಥಿತರಿರಲಿದ್ದಾರೆ. ಹೆಚ್ಚಿನ ಮಾಹಿತಿಗೆ ಶ್ರೀಧರ ಗಗಾನೆ, ಮೊ: ೯೭೩೯೭೧೭೨೯೬, ೮೨೭೭೫೩೮೭೮೦/೯೯೦೧೯೧೭೬೭೭ ಸಂಪರ್ಕಿಸಲು ಕೋರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ