Latest

ಷೇರು ಪೇಟೆಯಲ್ಲಿ ಭಾರೀ ಏರಿಳಿತ

  ಕೆ. ಜಿ. ಕೃಪಾಲ್
ಅಂಟಿಯೂ ಅಂಟದ ಹಾಗಿರಬೇಕು ಎಂಬಂತಾಗಿದ್ದರೆ  ಮಾತ್ರ ಷೇರುಪೇಟೆಯಲ್ಲಿ ಸುರಕ್ಷತೆ ಕಾಣಲು ಸಾಧ್ಯ.
ಷೇರುಪೇಟೆಯ ಚಟುವಟಿಕೆಯು ಒಂದೇ ದಿನ ಎಂತಹ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಇಂದಿನ ಚಟುವಟಿಕೆ ಉತ್ತಮ ಉದಾಹರಣೆಯಾಗಿದೆ.  ದಿನದ ಆರಂಭದಲ್ಲಿ ಸುಮಾರು 135   ಪಾಯಿಂಟುಗಳ ಏರಿಕೆಯನ್ನು ಕಂಡು  ನಂತರ ಸ್ವಲ್ಪ ಸಮಯದಲ್ಲೇ 85 ಪಾಯಿಂಟುಗಳ ಕುಸಿತಕ್ಕೊಳಗಾಗಿ ಅಲ್ಲಿಂದ 416 ಪಾಯಿಂಟುಗಳ ಏರಿಕೆ ಕಂಡು ಅಂತ್ಯದಲ್ಲಿ 373 ಪಾಯಿಂಟುಗಳ ಏರಿಕೆಯೊಂದಿಗೆ ಕೊನೆಗೊಂಡಿದೆ.  ಅಂದರೆ ಸುಮಾರು 900 ಪಾಯಿಂಟುಗಳಷ್ಟು ಏರಿಳಿತವನ್ನು ನಿರಾಸಮಯವಾದ ಚಟುವಟಿಕೆಯಲ್ಲಿ ಪ್ರದರ್ಶಿಸಿದೆ.  ವ್ಯಾಲ್ಯೂ ಪಿಕ್ – ಪ್ರಾಫಿಟ್ ಬುಕ್ ಗಳ ಅವಳಿ ಸಂಗಮದ ಚಟುವಟಿಕೆಯೇ ಇಂದಿನ ದಿನಗಳಲ್ಲಿ ಹೆಚ್ಚು ಸುರಕ್ಷಿತ ಎನ್ನುವುದಕ್ಕೆ ಈ ಕೆಳಗಿನವು ಉತ್ತಮ ನಿದರ್ಶನವೆನ್ನಬಹುದು.
ಇಂದು ದಿನಂದ ಆರಂಭಿಕ ಚಟುವಟಿಕೆಯಲ್ಲಿ ರೂಪಾಯಿಯ ಬೆಲೆ ಹೆಚ್ಚಾದ್ದರಿಂದ ತಾಂತ್ರಿಕ ವಲಯದ ಅಗ್ರಮಾನ್ಯ ಕಂಪನಿಗಳಾದ ಇನ್ಫೋಸಿಸ್, ಟಿ ಸಿ ಎಸ್, ಹೆಚ್ ಸಿ ಎಲ್ ಟೆಕ್ ಮುಂತಾದವು ಹೆಚ್ಚಿನ ಕುಸಿತದಲ್ಲಿದ್ದವು.  ಇನ್ಫೋಸಿಸ್ ಷೇರಿನ ಬೆಲೆ ರೂ.600 ರ ಗಡಿವರೆಗೂ  ಕುಸಿದು ರೂ.627 ರವರೆಗೂ ಚೇತರಿಕೆ ಕಂಡು ರೂ.621 ರ ಸಮೀಪ ಕೊನೆಗೊಂಡಿತು.  ಟಿ ಸಿ ಎಸ್ ಸಹ ರೂ.1,800 ರ ಗಡಿಯೊಳಗೆ ಕುಸಿದು ನಂತರ ರೂ.1,859 ಕ್ಕೆ ಚೇತರಿಸಿಕೊಂಡು ರೂ.1,846  ರಲ್ಲಿ ಕೊನೆಗೊಂಡಿದೆ.
ಸಂವೇದಿ ಸೂಚ್ಯಕದ ಈ ರೀತಿಯ  ಭಾರಿ ಏರಿಕೆ ಪ್ರದರ್ಶನವಾಗಲು ಮತ್ತೊಂದು ಕಂಪನಿ ಮಾರುತಿ ಸುಜುಕಿ ಹೆಚ್ಚಿನ ಕೊಡುಗೆ ನೀಡಿದೆ.  ದಿನದ ಆರಂಭದಲ್ಲಿ ರೂ.7,448 ರಲ್ಲಿದ್ದ ಈ ಕಂಪನಿ ರೂ.7,390 ಕ್ಕೆ ಕುಸಿದು ನಂತರ ಪುಟಿದೆದ್ದು ರೂ.7,562 ರವರೆಗೂ ಏರಿಕೆ ಕಂಡು ರೂ.7,533  ರಲ್ಲಿ ಕೊನೆಗೊಂಡಿದೆ.  ಹಿಂದುಸ್ಥಾನ್ ಯುನಿಲಿವರ್ ಷೇರು ಸಹ ರೂ.1,678 ರಿಂದ ರೂ.1,749 ರವರೆಗೂ ಏರಿಕೆ ಕಂಡಿದೆ.   ಟಾಟಾ ಸ್ಟಿಲ್ ಷೇರಿನ ಬೆಲೆ ರೂ.544 ರ ಸಮೀಪದಿಂದ  ರೂ.522 ರವರೆಗೂ ಕುಸಿದು ರೂ.530 ರವರೆಗೂ ಪುಟಿದೆದ್ದಿದೆ. ಹೀರೊ ಮೋಟೊಕಾರ್ಪ್, ವಿಪ್ರೋ, ಏಷಿಯನ್ ಪೇಂಟ್ಸ್, ಬಜಾಜ್ ಆಟೋ, ಐಟಿಸಿ, ಗಳು ಸಹ ತಮ್ಮ ಕೊಡುಗೆ ನೀಡಿ ಸಂವೇದಿ ಸೂಚ್ಯಂಕದ ಏರಿಕೆಗೆ ಕಾರಣವಾದವು
(ಲೇಖಕರು ಆರ್ಥಿಕ ಅಂಕಣಕಾರರು, ಬೆಂಗಳೂರು)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button