Kannada NewsKarnataka News

ಲೋಳಸೂರದಿಂದ ಬಳೋಬಾಳ ವರೆಗಿನ ರಸ್ತೆ ಸುಧಾರಣೆಗೆ 3.20 ಕೋಟಿ ರೂಪಾಯಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಲೋಳಸೂರದಿಂದ ಬಳೋಬಾಳ ವರೆಗಿನ ರಸ್ತೆ ಕಾಮಗಾರಿಯು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದಾಗಿ ರಸ್ತೆ ಸುಧಾರಣೆಗೆ ಅನುದಾನ ಬಿಡುಗಡೆಗೊಂಡಿದೆ ಎಂದು ನ್ಯಾಯವಾದಿ ಎಮ್ ಕೆ ಕುಳ್ಳೂರ ಹೇಳಿದರು.
ಅವರು, ಇಲ್ಲಿಗೆ ಸಮೀಪದ ಲೋಳಸೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಡಿ ಮಂಜೂರಾದ ೩.೨೦ಕೋಟಿ ರೂಗಳ ವೆಚ್ಚದ ಲೋಳಸೂರ-ಬಳೋಬಾಳ ರಸ್ತೆ ಸುಧಾರಣೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಸ್ತೆ ಕಾಮಗಾರಿಗೆ ಅನುದಾನ ತಂದಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಯುವ ಮುಖಂಡ ನಾಗೇಶ ಶೇಖರಗೋಳ ಮಾತನಾಡಿ, ಲೋಳಸೂರ-ಬಸಳಿಗುಂದಿ- ನಲ್ಲಾನಟ್ಟಿ-ಬಳೋಬಾಳ ಗ್ರಾಮಸ್ಥರ ಬೇಡಿಕೆಯನ್ನು ಶಾಸಕರು ಈಡೇರಿಸಿದ್ದಾರೆ. ನಿಗದಿತ ಅವಧಿಯೊಳಗೆ ೬ಕಿ.ಮೀ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಅರಭಾಂವಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ವಿನೋದ ಪೂಜೇರಿ, ಸಿದ್ದಯ್ಯ ಹೋಳಗಿ, ನಾಗಪ್ಪ ಕುರಬನ್ನವರ, ಸಿದ್ದಪ್ಪ ಹಟ್ಟಿ, ಬಾಗಪ್ಪ ಮಡ್ಡೆಪ್ಪನವರ, ನಜೀರ ಮಕಾನದಾರ, ಪರಸಪ್ಪ ಕುಳ್ಳೂರ, ಶಿವಾಜಿ ಅರಭಾಂವಿ, ಗಂಗಪ್ಪ ನಡುವಿನಮನಿ, ವಿಠ್ಠಲ ಮಡ್ಡೆಪ್ಪನವರ, ಜ್ಯೋತೆಪ್ಪ ಗಡಾದ, ಗುತ್ತಿಗೆದಾರ ಮಹಾದೇವ ಹಾರೂಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Back to top button