ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಧಾರವಾಡದ ನಾದ ಝೇಂಕಾರ ಸಾಂಸ್ಕೃತಿಕ ಸಂಘ, ನ್ಯೂಸ್ ಟೈಂ ಚಾನೆಲ್ಗಳ ಸಂಯುಕ್ತಾಶ್ರಯದಲ್ಲಿ ಉತ್ತರ ಕರ್ನಾಟಕದ ಯುವ ಗಾಯಕ, ಗಾಯಕಿಯರಿಗಾಗಿ ಸಿಂಗಿಂಗ್ ಐಡಿಯಲ್ ಆಫ್ ಧಾರವಾಡ ಎಂಬ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಮೇ ೧೨ ರಂದು ಬೆಳಗ್ಗೆ ೮ ರಿಂದ ಸಂಜೆ ೭ ರವರೆಗೆ ಬೆಳಗಾವಿಯ ಶ್ರೀನಗರ ಪಾರ್ಕ್ ಬಳಿಯ ಲವ್ಡೇಲ್ ಶಾಲೆಯ ಹತ್ತಿರದ ಶ್ರೀ ಗಣೇಶ ಮಂದಿರದಲ್ಲಿ ಹಾಗೂ ಮೇ ೧೪ ರಂದು ಬೆಳಗ್ಗೆ ೮ ರಿಂದ ಸಂಜೆ ೭ ರವರೆಗೆ ಬೆಳಗಾವಿ ತಾಲೂಕು ಕಿತ್ತೂರಿನ ಕಲ್ಮಠದಲ್ಲಿ ಆಡಿಶನ್ ನಡೆಸಲಾಗುವುದು.
ಸ್ಪರ್ಧೆಯಲ್ಲಿ ಅಂತಿಮ ಹಂತದ ವಿಜೇತರಿಗೆ ಪ್ರಥಮ ಬಹುಮಾನ ೩೩,೩೩೩ ರೂ, ದ್ವಿತೀಯ ಬಹುಮಾನ ೧೫,೫೫೫ ರೂ, ತೃತೀಯ ಬಹುಮಾನ ೭,೭೭೭ ರೂ. ಹಾಗೂ ಸಮಾಧಾನಕರ ಬಹುಮಾನ ೩,೩೩೩ ರೂ. ನಗದು ನೀಡಲಾಗುವುದು. ಜೊತೆಗೆ ಅಲ್ಬಂ ಗೀತೆಗಳಲ್ಲಿ ಹಾಡಲು ಅವಕಾಶ ನೀಡಲಾಗುವುದು.
ಸ್ಪರ್ಧೆಯಲ್ಲಿ ೧೫ ವರ್ಷ ಮೇಲ್ಪಟ್ಟ ಗಾಯಕ, ಗಾಯಕಿಯರು ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ.: ೯೫೩೮೫೧೬೬೬೫, ೭೨೫೯೧೦೫೪೪೩ಗೆ ಸಂಪರ್ಕಿಸಬಹುದು ಎಂದು ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಾರ್ಯಾಧ್ಯಕ್ಷ ಯಮನಪ್ಪ ಜಾಲಗಾರ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ