Kannada NewsKarnataka NewsLatest
*B.ED ವಿದ್ಯಾರ್ಥಿ ಅನುಮಾನಾಸ್ಪದ ಸಾವು*

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಬಿಇಡಿ ವಿದ್ಯಾರ್ಥಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಹನುಮಂತ (23) ಮೃತ ವಿದ್ಯಾರ್ಥಿ. ರೈಲ್ವೆ ಹಳಿ ಬಳಿ ಹನುಮಂತ ಶವ ಪತ್ತೆಯಾಗಿದೆ. ಯಾರೋ ಕೊಲೆ ಮಾಡಿ ಮೃತದೇಹವನ್ನು ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ.
ಹನುಮಂತ ಮಾನ್ವಿ ತಲೂಕಿನ ಮೈಲ್ ಮರ್ಚಡ್ ಗ್ರಾಮದ ನಿವಾಸಿಯಾಗಿದ್ದು, ರಾಯಚೂರು ಖಾಸಗಿ ಕಾಲೇಜಿನಲ್ಲಿ ಬಿಇಡಿ ಓದುತ್ತಿದ್ದ. ನಿನ್ನೆ ತಡರಾತ್ರಿ ಬ್ಯಾಗ್ ಸಮೇತ ಹಾಸ್ಟೇಲ್ ನಿಂದ ತೆರಳಿದ್ದ ವಿದ್ಯಾರ್ಥಿ ಇಂದು ಶವವಾಗಿ ಪತ್ತೆಯಾಗಿದ್ದಾನೆ.
ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




