Kannada NewsLatestPolitics

*ಕಳಪೆ ಆಹಾರ ನೀಡಿದರೆ ಹುಷಾರ್: ಪಿಜಿ, ಹಾಸ್ಟೆಲ್ ಗಳ ಮೇಲೂ ನಡೆಯಲಿದೆ ಅಧಿಕಾರಿಗಳ ದಾಳಿ*

ಪ್ರಗತಿವಾಹಿನಿ ಸುದ್ದಿ: ಪಿಜಿ ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ ನೀಡಿ ಸಿಕ್ಕಿ ಬಿದ್ದರೆ ಕ್ಷಮಾಪಣೆ ಇಲ್ಲ, ಖಾಸಗಿ ಹಾಸ್ಟೆಲ್ ಕೂಡ ಪರಿಶೀಲನೆ ಮಾಡ್ತೇವೆ ಎಂದು ಸಚಿವ ಯು.ಟಿ ಖಾದರ್‌ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಆಹಾರ ಇಲಾಖೆ ಅಧಿಕಾರಿಗಳು ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ಮುಂದೆ ಪುಜಿ, ಹಾಸ್ಟೆಲ್ ಗಳ ಮೇಲೂ ದಾಳಿ ನಡೆಸಿ ಆಹಾರದ ಗುಣಮಟ್ಟ, ಸ್ವಚ್ಚತೆ ಬಗ್ಗೆ ಖುದ್ದು ಪರಿಶೀಲನೆ ನಡೆಸಲಿದ್ದಾರೆ ಎಂದರು.

Home add -Advt

ಪಿಜಿ ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ, ಯುವಸಮೂಹ, ವಿದ್ಯಾರ್ಥಿಗಳ ನೋವಿನಲ್ಲಿ ದುಡ್ಡು ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು. ಪಿಜಿಗಳು ಮತ್ತೆ ತಪ್ಪು ಮಾಡಿದ್ರೆ ಕ್ಷಮಿಸುವ ಮಾತೇ ಇಲ್ಲ. ಖಾಸಗಿ ಹಾಸ್ಟೆಲ್‌ಗಳನ್ನೂ ಚೆಕ್ ಮಾಡ್ತೇವೆ ಎಂದು ಹೇಳಿದರು.

ಹೋಟೆಲ್‌ಗಳಲ್ಲಿ ಆಹಾರ ಪದಾರ್ಥ ತಯಾರು ಮಾಡುವ ಕಡೆ ತಪಾಸಣೆ ಮಾಡಿದ್ದೇವೆ, ಎಲ್ಲಿಂದ ಆಹಾರ ಪದಾರ್ಥಗಳು ಸರಬರಾಜು ಆಗುತ್ತವೆ ಅನ್ನೋದನ್ನೂ ತಪಾಸಣೆ ಮಾಡಿದ್ದೇವೆ. ರಾಜ್ಯದಲ್ಲಿ 30 ಟೀಂ ತಯಾರು ಮಾಡಿ, 60ಕ್ಕೂ ಹೆಚ್ಚು 3 ಸ್ಟಾರ್, 5 ಸ್ಟಾರ್, 8 ವೇರ್ ಹೌಸ್, 4 ಅಂತಾರಾಷ್ಟ್ರೀಯ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ. 30 ಆಹಾರ ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯಕ್ಕೆ ಫಾರಿನ್ ಕಂಪನಿ ಚಾಕೊಲೆಟ್‌ಗಳು ಬರುತ್ತವೆ, ಶುಗರ್‌ನಲ್ಲಿ ಭಾರೀ ವ್ಯತ್ಯಾಸ ಇದೆ. ಸೆಂಟ್ರಲ್ ಆಕ್ಟ್‌ನಲ್ಲಿ ಚೇಂಜ್ ಆಗಬೇಕು. ಕೇಂದ್ರ ಆಹಾರ ಸಚಿವರಿಗೆ ಸಚಿವರಿಗೆ ಮಾಹಿತಿ ಕೊಡ್ತೇವೆ. ಇನ್ನೂ ಈಗಾಗಲೇ ಕಳಪೆ ಆಹಾರದೊಂದಿಗೆ ಸಿಕ್ಕಿಬಿದ್ದಿರುವ ಹೋಟೆಲ್‌ಗಳಿಗೆ ನೋಟಿಸ್ ಜೊತೆಗೆ 5 ಲಕ್ಷದ ವರೆಗೂ ದಂಡ ಹಾಕ್ತೇವೆ. ದಂಡ ಹಾಕಿ ಕ್ರಮ ವಹಿಸುತ್ತೇವೆ, ಕ್ಷಮಿಸುವ ಮಾತೇ ಇಲ್ಲ ಎಂದು ತಿಳಿಸಿದರು.

Related Articles

Back to top button