Latest

ಹಿರೇಮಠ ಇಡೀ ರಾಷ್ಟ್ರವೇ ಗುರುತಿಸುವ ಹಾಗೆ ಬೆಳೆದು ನಿಂತಿದೆ- ಮುಗಳಕೋಡ ಸ್ವಾಮೀಜಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಸಮಾಜ ಸೇವೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಹುಕ್ಕೇರಿಯ ಹಿರೇಮಠ ಇಡೀ ರಾಷ್ಟ್ರವೇ ಗುರುತಿಸುವ ಹಾಗೆ ಬೆಳೆದು ನಿಂತಿದೆ ಎಂದು ಮುಗಳಕೋಡದ ಡಾ.ಮುರಘರಾಜೇಂದ್ರ ಸ್ವಾಮೀಜಿ ಹೇಳಿದರು.

ಇತ್ತೀಚೆಗೆ ನಗರದ ಲಕ್ಷ್ಮೀ ಟೇಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಮಹಿಳೆಯರಿಗೆ ವೇದ ತರಬೇತಿ ಹಾಗೂ ಎಲ್ಲ ಸದ್ಬಕ್ತರೊಂದಿಗೆ ಸಹಭೋಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹುಕ್ಕೇರಿ ಹಿರೇಮಠದಲ್ಲಿ ಜಾತಿ, ಮತ, ಪಂಥ ಎನ್ನದೆ ಎಲ್ಲ ಸಮುದಾಯದ ಮಹಿಳೆಯರಿಗೆ ರುದ್ರ ಕಲಿಸುವ ಅಪರೂಪದ ಕಾರ್ಯವನ್ನ ಶ್ರೀಮಠ ಮಾಡುತ್ತಿದೆ. ಶ್ರೀಮಠದ ವಿನೂತನ ಕಾರ್ಯಕ್ರಮ ಪ್ಲಾಸ್ಟಿಕ್ ಮುಕ್ತ ಅಭಿಯಾನ ಎಲ್ಲರಿಗೂ ಮಾದರಿಯಾಗಿದೆ. ನಾವೆಲ್ಲರೂ ಕೂಡ ಶ್ರೀಮಠದ ಕಾರ್ಯವನ್ನು ಶ್ಲಾಘಿಸುವುದರ ಜತೆಗೆ ಆದರ್ಶವನ್ನು ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ. ಶ್ರೀಗಳು ಎಲ್ಲರೊಂದಿಗೆ ಸಹಭೋಜನ ಮಾಡುವುದರ ಮೂಲಕ ಭಕ್ತರಲ್ಲಿ ವಿಶೇಷವಾಗಿ ಪ್ತಸಾದದ ಮಹತ್ವವನ್ನು ಬಿತ್ತುತ್ತಿರುವುದು ಅಭಿಮಾನದ ಸಂಗತಿ ಎಂದರು.

ನವೆಂಬರ್, ಡಿಸೆಂಬರ್ ಅವಧಿಯಲ್ಲಿ ಒಂದು ಲಕ್ಷ ಅರಿವೆಯ ಚೀಲ ನೀಡುವುದರ ಮೂಲಕ ಪ್ಲಾಸ್ಟಿಕ್ ಮುಕ್ತ ಮಾಡಲು ಹೊರಟಿರುವ ಶ್ರೀಮಠದ ಕಾರ್ಯಕ್ಕೆ ಎಲ್ಲ ಭಕ್ತರು ಕೈ ಜೊಡಿಸಬೇಕಿದೆ. ಎಲ್ಲರೂ ಅರಿವೆಯ ಚೀಲ ಬಳಸಿದರೆ ಖಂಡಿತವಾಗಿ ಪ್ಲಾಸ್ಟಿಕ್ ಮುಕ್ತ ಭಾರತವಾಗುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಶ್ರೀಗಳು ಹೇಳಿದರು.

ಇದೇ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಶ್ರೀಗಳನ್ನು ಗೌರವಿಸಿದರು.

ಎನ್.ಚೌಗಲಾ, ಎಂ.ವಿ.ಹಿರೇಮಠ, ವಿರುಪಾಕ್ಷಯ್ಯ ನೀರಲಗಿಮಠ, ಸಾಲಿಮಠ, ಶಂಕ್ರಯ್ಯ ಹಿರೇಮಠ, ಸೋಮಶೇಖರ ಹಿರೇಮಠ, ವಿಜಯ ಶಾಸ್ತ್ರೀ, ಬಿ.ಎಸ್.ಗವಿಮಠ ಇನ್ನಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button