ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಳದ ಅಧಿವೇಶನದ ಹಿನ್ನೆಲೆಯಲ್ಲಿ ಶಾಸಕರಿಗೆ ಬೆಳಗಾವಿ ಹಾಗೂ ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೆಲ್ ಗಳಲ್ಲಿ ಕೊಠಡಿ ಕಾಯ್ದಿರಿಸಲಾಗಿದ್ದು, ಅವುಗಳನ್ನು ಹಂಚಿಕೆ ಮಾಡಲಾಗಿದೆ.
ಬೆಳಗಾವಿಯ ಸ್ಥಳೀಯ ಶಾಸಕರಿಗೂ ಪ್ರತಿವರ್ಷದಂತೆ ಹೊಟೆಲ್ ಕೊಠಡಿ ಕಾಯ್ದಿರಿಸಲಾಗಿದೆ. ಆದರೆ ಸವದತ್ತಿ ಶಾಸಕ ಆನಂದ ಮಾಮನಿ ಮಾತ್ರ ತಮಗೆ ಕೊಠಡಿ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಹಾಗೆಯೇ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೂಡ ಕೊಠಡಿ ಬೇಡವೆಂದಿದ್ದಾರೆ.
ಪ್ರತಿಬಾರಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ನಗರದ ಪ್ರವಾಸಿ ಮಂದಿರ ಸಭಾಧ್ಯಕ್ಷ ಹಾಗೂ ಸಭಾಪತಿಗಳಿಗೆ ವಿಟಿಯು ಅತಿಥಿ ಗೃಹ ಕಾಯ್ದಿರಿಸಲಾಗುತ್ತದೆ. ಸಚಿವರಿಗೆ ನೀಡಲಾಗಿರುವ ಕೊಠಡಿ ವಿವರ ಈ ಪಟ್ಟಿಯಲ್ಲಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಜಗದೀಶ ಶೆಟ್ಟರ್, ಶಾಸಕರಾದ ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಎಲ್ಲಿ ಎನ್ನುವ ಮಾಹಿತಿ ಇಲ್ಲ.
ನಗರದ ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಅವರಿಗೆ ನೇಟಿವ್ ಹೊಟೆಲ್ ನಲ್ಲಿ ಕೊಠಡಿ ನೀಡಲಾಗಿದೆ. ಸತೀಶ್ ಜಾರಕಿಹೊಳಿಗೆ ಹಾಗೂ ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳಕರ್, ಅಂಜಲಿ ನಿಂಬಾಳಕರ್, ಶಶಿಕಲಾ ಜೊಲ್ಲೆ ಅವರಿಗೆ ಮ್ಯಾರಿಯೆಟ್ ಹೊಟೆಲ್ ನಲ್ಲಿ ಕೊಠಡಿ ನೀಡಲಾಗಿದೆ. ಪಟ್ಟಿಯಲ್ಲಿ ವಿಧಾನಸಭೆಯಸಚೇತಕ ಗಣೇಶ ಹುಕ್ಕೇರಿ ಹಾಗೂ ವಿಧಾನಪರಿಷತ್ ಸಚೇತಕ ಮಹಾಂತೇಶ ಕವಟಗಿಮಠ ಅವರ ಹೆಸರಿಲ್ಲ. ಅವರಿಗೆ ವಿಟಿಯು ಅಥವಾ ಕೆಎಲ್ಇ ಅತಿಥಿಗೃಹ ಕಾಯ್ದಿರಿಸಿರುವ ಸಾಧ್ಯತೆ ಇದೆ.
ಶಾಸಕ ಉಮೇಶ ಕತ್ತಿ ಅವರಿಗೆ ಅವರದೇ ಮಾಲಿಕತ್ವದ ಯುಕೆ 27 ಹೊಟೆಲ್ ನಲ್ಲಿ ಕೊಠಡಿ ನೀಡಲಾಗಿದೆ.
ಹುಬ್ಬಳ್ಳಿಯ ನವೀನ್ ಮತ್ತು ಪರ್ಲ್ ಹೊಟೆಲ್ ನಲ್ಲಿ ತಲಾ ಒಂದು ಹಾಗೂ ಡೆನ್ನಿಸನ್ ಹೊಟೆಲ್ ನಲ್ಲಿ 6 ಶಾಸಕರಿಗೆ ಕೊಠಡಿ ನೀಡಲಾಗಿದೆ. 10 ಶಾಸಕಿಯರಿಗೆ ಮ್ಯರಿಯೆಟ್ ಹೊಟೆಲ್ ಕೊಠಡಿ ನೀಡಲಾಗಿದೆ.
ಯುಕೆ 27 ಹೊಟೆಲ್ ನಲ್ಲಿ 30 ಕೊಠಡಿಗಳನ್ನು ವಿಧಾನಪರಿಷತ್ ಸದಸ್ಯರಿಗೆ ಹಾಗೂ 35 ಕೊಠಡಿಗಳನ್ನು ವಿಧಾನಸಭಾ ಸದಸ್ಯರಿಗೆ ಹಂಚಲಾಗಿದೆ. ಮ್ಯಾರಿಯೆಟ್ ನಲ್ಲಿ 25 ಕೊಠಡಿ ವಿಧಾನಪರಿಷತ್ ಸದಸ್ಯರಿಗೆ, 55 ಕೊಠಡಿ ವಿಧಾನಸಭಾ ಸದಸ್ಯರಿಗೆ ಹಂಚಲಾಗಿದೆ. ಈಫಾದಲ್ಲಿ 5 ಕೊಠಡಿ ವಿಧಾನಪರಿಷತ್ ಸದಸ್ಯರಿಗೆ, 15 ವಿಧಾನಸಭಾ ಸದಸ್ಯರಿಗೆ ನೀಡಲಾಗಿದೆ. ಸಂಕಮ್ ದಲ್ಲಿ 8 ವಿಧಾನಪರಿಷತ್ ಸದಸ್ಯರಿಗೆ, 20 ವಿಧಾನಸಭಾ ಸದಸ್ಯರಿಗೆ ನೀಡಲಾಗಿದೆ. ನೇಟಿವ್ ದಲ್ಲಿ ಎಲ್ಲ 42 ಕೊಠಡಿಗಳನ್ನು ಶಾಸಕರಿಗೆ ಹಂಚಲಾಗಿದೆ. ಸನ್ಮಾನ್ ಹೊಟೆಲ್ ನಲ್ಲಿ 13 ಶಾಸಕರಿಗೆ ಕೊಠಡಿ ನೀಡಲಾಗಿದೆ.
ಶಾಸಕರಿಗೆ ಹಂಚಲಾಗಿರುವ ಕೊಠಡಿಗಳ ವಿವರ ಕೆಳಗಿನಂತಿದೆ:
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ