Latest

’ಅಪರೂಪದ ಅವರಾದಿ’ ಗ್ರಂಥ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಅವರಾದಿ :

ಅವರಾದಿ ಗ್ರಾಮದ ಯುವಪೀಳಿಗೆಯು ಸನ್ಮಾರ್ಗದತ್ತ ಸಾಗಿ ನಾಡಿಗೆ ಗ್ರಾಮಕ್ಕೆ ಒಳ್ಳೆಯ ಹೆಸರು ತರಲು ’ಅಪರೂಪದ ಅವರಾದಿ ಗ್ರಂಥ ಮಾರ್ಗದರ್ಶಿಯಾಗಿದೆ ಎಂದು ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಇಂಗ್ಲೀಷ ವಿಭಾಗದ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲೆಪ್ಪನವರಮಠ ನುಡಿದರು.
ಅವರು ಶನಿವಾರ ಅವರಾದಿ ಗ್ರಾಮದ ಗ್ರಾಮದೇವತೆಗಳಾದ ಶ್ರೀಲಕ್ಷ್ಮೀದೇವಿ ಹಾಗೂ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ.ಎ.ಪಿ. ಬಿರಾದಾರಪಾಟೀಲ ರಚಿಸಿದ ಅಪರೂಪದ ಅವರಾದಿ ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಶಿಕ್ಷಣ, ವೈದ್ಯಕೀಯ, ಕನೂನು, ವ್ಯಾಪಾರೊದ್ಧಿಮೆ, ವಿಜ್ಞಾನ, ತಂತ್ರಜ್ಞಾನ, ಸಾಮಾಜಿಕ, ಆರ್ಥಿಕ, ಕೃಷಿ, ದಾನ, ಶತಾಯುಷಿಗಳಂತಹ ಮಹತ್ವದ ರಂಗಗಳಲ್ಲಿ ವಿಶಿಷ್ಠ ಶ್ರಮ ಸಾಧನೆಯಿಂದಾಗಿ ಹುಟ್ಟೂರಿನ ಸಿರಿಮುಡಿಗೆ ಹೂ ತಂದ ಮಹನೀಯರ ಮತ್ತು ಮಹಿಳೆಯರ ಸಾಧನೆಗಳ ಸ್ವರೂಪವನ್ನು ಲೇಖಕರು ಗ್ರಂಥದಲ್ಲಿ ಆದರಾಭಿಮಾನದಿಂದ ನೀಡಿದ್ದನ್ನು ಶ್ಲಾಘಿಸಿದರು.
ಗ್ರಂಥದ ಪ್ರಮುಖ ಉದ್ದೇಶಗಳಾದ ಇಂದು ಮರೆತು ಹೊಗುತ್ತಿರುವ ಗ್ರಾಮದ ಹಬ್ಬ ಹರಿದಿನಗಳು, ಉಳಿಸಿ ಬೆಳೆಸಿಕೊಂಡು ನಮ್ಮ ನಾಡಿನ ಸಂಸ್ಕೃತಿಯನ್ನು ಉನ್ನತೀಕರಿಸುವುದರ ಕುರಿತು ಲೇಖಕರು ಹೊಂದಿರುವ ಕಳಕಳಿಯನ್ನು ತಿಳಿಸಿದರು.
ಸಮಾರಂಭದಲ್ಲಿ ಡ್ರಾ.ಸುರೇಶ ವೆಂಕನಗೌಡ ನಾಡಗೌಡರ, ಡಾ.ಎ.ಪಿ.ಬಿರಾದಾರಪಾಟೀಲ, ವಿ ಪಿ ನಾಯಿಕ್, ಪ್ರೊ.ಅಭಯ ಗಸ್ತಿ, ವಿಜಯ ತೇಲಿ,  ವಿ ಆರ್ ಮಾಳಗಿಮನಿ, ಶಂಕರಗೌಡ ಪಾಟೀಲ, ಗುರಪ್ಪ ಉಟಗಿ, ಮಲ್ಲನಗೌಡಾ ಪಾಟೀಲ, ಟಿ.ಆರ್.ಬಿ. ಪಾಟೀಲ, ಎನ್.ಎ.ಬಿ ಪಾಟೀಲ, ಅರ್ಜುನ ಬಿ ಪಾಟೀಲ ಉಪಸ್ಥಿತರಿದ್ದರು. ವಿ.ಪಿ.ನಾಯಿಕ ಸ್ವಾಗತಿಸಿದರು, ಶ್ರೀಶೈಲ ಪೂಜೇರಿ ವಂದಿಸಿದರು, ಪ್ರೊ.ಸಿದ್ದನಗೌಡ ಪಾಟೀಲ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button