ರಾಮನಾಥಿ (ಗೋವಾ) –
ಅಯೋಧ್ಯೆಯು ದೇವತೆಗಳು ನಿರ್ಮಿಸಿದ ‘ಕೌಶಲನಗರ’ವಾಗಿದ್ದು ಅಯೋಧ್ಯೆಯ ಒಟ್ಟು ಭೂಮಿಯು ಶಾಸ್ತ್ರೀಯ ಪರಿಭಾಷೆಯಲ್ಲಿ ಹೇಳಬೇಕಾದರೆ ೮೪ ಮೈಲಿ ಇದೆ. ಈ ಪರಿಸರದಲ್ಲಿ ಸೀತಾಕುಂಡ, ಸಪ್ತಸಾಗರ ಸರೋವರಗಳೊಂದಿಗೆ ಅನೇಕ ಕುಂಡ ಹಾಗೂ ಸರೋವರಗಳ ಸಮಾವೇಶವಿದೆ; ಆದರೆ ಪ್ರತ್ಯಕ್ಷ ಅಯೋಧ್ಯೆ ನಗರ ೫ ಕಿ.ಮೀ ಅಷ್ಟೇ ಉಳಿದಿದೆ. ಉಳಿದ ಭಾಗದ ಅನೇಕ ಸ್ಥಳಗಳಲ್ಲಿ ಮಸೀದಿ ಹಾಗೂ ಮಜಾರಗಳನ್ನು ನಿರ್ಮಿಸಲಾಗಿದೆ. ಭೂ-ಮಾಫಿಯಾಗಳು ಅನೇಕ ಕುಂಡಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅದನ್ನು ಆರಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಅಯೋಧ್ಯೆಯಲ್ಲಿ ೩೪ ಮಸೀದಿಗಳನ್ನು ನಿರ್ಮಿಸಲಾಗಿದೆ. ಅಯೋಧ್ಯೆಯಲ್ಲಿ ವೇಗವಾಗಿ ಆಗುತ್ತಿರುವ ಇಸ್ಲಾಮಿಕರಣದ ವಿರುದ್ಧ ಹಿಂದೂಗಳು ಜಾಗೃತವಾಗುವುದು ಅವಶ್ಯಕವಿದೆ, ಎಂದು ಅಯೋಧ್ಯೆಯಲ್ಲಿಯ ‘ಸದ್ಗುರು ಸೇವಾ ಪ್ರತಿಷ್ಠಾಪನ’ದ ವ್ಯವಸ್ಥಾಪಕರಾದ ಆಚಾರ್ಯ ವೈದ್ಯ ರಾಮಪ್ರಕಾಶ ಪಾಂಡೆ ಹೇಳಿದ್ದಾರೆ.
ಅವರು ಇಂದು ಶ್ರೀ ರಾಮನಾಥ ದೇವಸ್ಥಾನದಲ್ಲಿಯ ಶ್ರೀ ವಿದ್ಯಾಧಿರಾಜ ಸಭಾಂಗಣದಲ್ಲಿ ‘ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ನಾಲ್ಕನೇ ದಿನದಂದು ಮಾತನಾಡುತ್ತಿದ್ದರು.
ತೆಲಂಗಾಣದಲ್ಲಿಯ ‘ಋಷಿ ಜೀವನ ಸಮಾಜ’ದ ಸಂಸ್ಥಾಪಕರಾದ ಪಿ. ಮದನ ಗುಪ್ತಾರವರು ಮಾತನಾಡುತ್ತಾ, “ಸನಾತನ ಧರ್ಮದಲ್ಲಿ ದೇವಸ್ಥಾನವು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರವನ್ನು ಜೋಡಿಸುವ ಕಾರ್ಯವನ್ನು ಮಾಡುತ್ತದೆ. ದೇವಸ್ಥಾನ ಇದು ನ್ಯಾಯಾಲಯ, ಸಂಸ್ಕೃತಿ, ಅದೇರೀತಿ ಒಂದು ಆರ್ಥಿಕ ಕೇಂದ್ರವಾಗಿದೆ” ಎಂದು ಹೇಳಿದರು.
ಕೇರಳದಲ್ಲಿಯ ‘ಹಿಂದು ಐಕ್ಯ ವೇದಿ’ಯ ಜಿಲ್ಲಾ ಉಪಾಧ್ಯಕ್ಷ ಪೂ. ತ್ರಿಪಿಂಡಿ ಸ್ವಾಮಿ ಶ್ರೀ ಚೈತನ್ಯ ದಾಸ ಭಾರತಿ ಮಹಾರಾಜರು ಮಾತನಾಡುತ್ತಾ, “ಕೇರಳ ರಾಜ್ಯದಲ್ಲಿ ೪೪ ಹೆಕ್ಟೆರ ಭೂಮಿ ಕಾನೂನು ಬಾಹಿರವಾಗಿ ಅನೇಕರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಅದಕ್ಕಾಗಿ ನಾವು ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದೇವೆ ಮತ್ತು ನಮ್ಮ ಹೋರಾಟ ನಡೆಯುತ್ತಿದೆ” ಎಂದು ಹೇಳಿದರು.
ತಮಿಳುನಾಡಿನ ‘ಟೆಂಪಲ್ ವರ್ಶಿಪರ್ಸ ಸೊಸೈಟಿ’ಯ ಶ್ರೀ. ಟಿ.ಆರ್. ರಮೇಶರವರು ಮಾತನಾಡುತ್ತಾ, “ಮರಾಠರು ತೋರಿಸಿದ್ದ ಪರಾಕ್ರಮದಿಂದಾಗಿ ಇಂದು ತಮಿಳುನಾಡು ಹಾಗೂ ಒಡಿಶಾ ರಾಜ್ಯಗಳಲ್ಲಿ ಹಿಂದೂಗಳು ಬದುಕುಳಿದಿದ್ದಾರೆ. ದೌರ್ಭಾಗ್ಯದಿಂದ ಇದು ನಮಗೆ ಇತಿಹಾಸದಲ್ಲಿ ತಿಳಿಸಿಲ್ಲ. ದಕ್ಷಿಣ ಭಾರತದಲ್ಲಿ ಇಲ್ಲಿಯವರೆಗೆ ದೇವಸ್ಥಾನದ ಲಕ್ಷಗಟ್ಟಲೆ ಎಕರೆಯ ಭೂಮಿಯನ್ನು ಸರಕಾರವು ವಶಪಡಿಸಿಕೊಂಡಿದೆ. ಕೇರಳದಲ್ಲಿ ೪ ಲಕ್ಷ ಎಕರೆ ಭೂಮಿ ರಾಜ್ಯ ಸರಕಾರವು ಕಬಳಿಸಿದೆ” ಎಂದು ಹೇಳಿದರು.
ಸನಾತನದ ನಿರಪರಾಧಿ ಸಿದ್ಧವಾಗುವುದು
ಸನಾತನ ಸಂಸ್ಥೆಯು ಡಾ. ನರೇಂದ್ರ ದಾಭೋಲಕರರ ಟ್ರಸ್ಟ್‌ದಲ್ಲಿನ ಹಗರಣಗಳನ್ನು ಬಯಲಿಗೆಳೆಯಿತು ಹಾಗೂ ಗೋವಿಂದ ಪಾನಸಾರೆ ನೇತೃತ್ವ ವಹಿಸಿದ್ದ ಸಹಕಾರಿ ಬ್ಯಾಂಕ್‌ನಲ್ಲಿ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷವು ಅಕ್ರಮವಾಗಿ ಠೇವಣಿ ಇಟ್ಟಿರುವುದನ್ನು ಬಯಲಿಗೆಳೆದಿತ್ತು. ಆದುದರಿಂದಲೇ ತನಿಖಾ ದಳ ಸಹಿತ ಪ್ರಗತಿಪರರು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಗೆ ‘ಸಾಫ್ಟ್ ಟಾರ್ಗೆಟ್’ ಮಾಡುತ್ತಿದೆ. ಇಷ್ಟಲ್ಲದೇ ‘ಗೋಬೆಲ್ಸ್ ನೀತಿ’ಯನ್ನು ಬಳಸಿ ಸನಾತನವನ್ನು ಉಗ್ರವಾದಿ ಎಂದು ನಿರ್ಧರಿಸಲು ಹರಸಾಹಸ ಮಾಡುತ್ತಿದೆ. ಎಡಪಂಥೀಯರು ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಅನೇಕ ಹಿಂದುತ್ವನಿಷ್ಠ ನಾಯಕರ ಹಾಗೂ ಕಾರ್ಯಕರ್ತರ ಹತ್ಯೆ ಮಾಡಿತು. ಅದರ ಬಗ್ಗೆ ಚರ್ಚೆಯಾಗುತ್ತಿಲ್ಲ; ಆದರೆ ದೇಶದಲ್ಲಿ ಕೇವಲ ದಾಭೋಲಕರ, ಪಾನಸಾರೆ, ಗೌರಿ ಲಂಕೇಶ, ಕಲಬುರ್ಗಿ ಇವರದ್ದಷ್ಟೇ ಹತ್ಯೆಯಾಗಿದ್ದು ಹಿಂದುತ್ವನಿಷ್ಠ ಸಂಘಟನೆಗಳು ಉಗ್ರವಾದಿಯಾಗಿವೆ, ಎಂಬ ಭ್ರಮೆಯುಂಟು ಮಾಡುತ್ತಿದ್ದಾರೆ. ದಾಖಲಿಸಿದ ಖಟ್ಲೆಗಳಲ್ಲಿ ಪುರಾವೆಗಳಿಲ್ಲದ್ದರಿಂದ ನ್ಯಾಯಾಂಗ ಖಟ್ಲೆಯನ್ನೂ ನಡೆಸುತ್ತಿಲ್ಲ; ಆದರೆ ಮುಂಬರುವ ಕಾಲದಲ್ಲಿ ಸನಾತನದ ನಿರಪರಾಧಿತನ ಸಿದ್ಧವಾಗುವುದು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ಪ್ರತಿಪಾದಿಸಿದರು.
ಕೇಂದ್ರೀಯ ತನಿಖಾ ತಂಡವು ಅನ್ಯಾಯವಾಗಿ ಬಂಧಿಸಿದ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಸಂಜೀವ ಪುನಾಳೆಕರರನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಎಂದು ಭಾರತದಲ್ಲಿನ ವಿವಿಧ ರಾಜ್ಯಗಳು ಹಾಗೂ ಬಾಂಗ್ಲಾದೇಶದಿಂದ ಬಂದಿದ್ದ ೩೦ ಕ್ಕಿಂತ ಹೆಚ್ಚು ನ್ಯಾಯವಾದಿಗಳು ಅಧಿವೇಶನದ ಸ್ಥಳದಲ್ಲಿ ತೀವ್ರವಾಗಿ ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ