Latest

ಕೇರಳದಲ್ಲಿ ಕಮಲದ ಹೂವುಗಳಿಂದ ಮೋದಿ ತುಲಾಭಾರ

ಪ್ರಗತಿವಾಹಿನಿ ಸುದ್ದಿ, ತಿರುವನಂತಪುರಂ :

ಲೋಕಸಭೆ ಚುನಾವಣೆಯಲ್ಲಿ  ಭಾರಿ ಜಯಭೇರಿ ಭಾರಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಕೇರಳದಲ್ಲಿ  ಕಮಲದ ಹೂಗಳಿಂದ ತುಲಾಭಾರ ಮಾಡಲಾಯಿತು.

ಕೇರಳದ ಶ್ರಿಶೂರ್‌ನ ಪ್ರಸಿದ್ಧ ಗುರುವಾಯುರ್ ದೇವಾಲಯದಲ್ಲಿ ಪ್ರಧಾನಿ ಮೋದಿ ಅವರಿಗೆ ಕಮಲದ ಹೂಗಳಿಂದ ತುಲಾಭಾರ ಮಾಡಲಾಯಿತು. ಜೊತೆಗೆ ಮೋದಿ ಅವರು ಇಲ್ಲಿ ವಿಶೇಷ ಪೂಜೆಯಲ್ಲಿಯೂ ಪಾಲ್ಗೊಂಡಿದ್ದರು.

Home add -Advt

ಇದನ್ನು ಮೋದಿ ಟ್ವೀಟ್ ಮಾಡಿದ್ದು, ಈಗ ಅಲ್ಲಿ ಅವರ ಭಾಷಣ ಆರಂಭವಾಗಿದೆ.

Narendra Modi (@narendramodi) tweeted at 11:27 AM on Sat, Jun 08, 2019:
A blessed moment from the Guruvayur Temple.

https://t.co/MgBLNM3IHJ

https://twitter.com/narendramodi/status/1137237168428949508?s=03

ಮೋದಿ ಅವರು ದೇವಾಲಯದಲ್ಲಿ  ಪೂಜೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋದಿ ಅವರು ಸಹ ಪೂಜೆಯ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮೋದಿ ಅವರು ಕೇರಳ ಶೈಲಿಯಲ್ಲಿಯೇ ಪಂಚೆ, ಶಲ್ಯ ಧರಿಸಿ ದೇವರ ದರ್ಶನದಲ್ಲಿ ಭಾಗಿಯಾಗಿದ್ದಾರೆ.
ವಿಶೇಷವೆಂದರೆ ರಾಹುಲ್ ಗಾಂಧಿ ಅವರು ಸಹ ಇದೇ ಸಮಯದಲ್ಲಿ ಕೇರಳದಲ್ಲಿಯೇ ಇದ್ದಾರೆ. ಅವರ ಮೂರು ದಿನದ ಕೇರಳ ಭೇಟಿ ನಿನ್ನೆ ಶುರುವಾಗಿದೆ.

 

ಹೆಚ್ಚಿನ ಸುದ್ದಿಗಳಿಗಾಗಿ pragativahin.com ನೋಡಿ.

 

 

Related Articles

Back to top button