ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಬಡ-ಮಧ್ಯಮ ವರ್ಗದ ಜನರೂ ಕಾರಿನಲ್ಲಿ ಓಡಾಡುವಂತೆ ಮಾಡುವ ರತನ್ ಟಾಟಾ ಅವರ ಕನಸಿನ ಕೂಸು ನ್ಯಾನೋ ಕಾರು ಉತ್ಪಾದನೆ ಸಧ್ಯವೇ ಸ್ಥಗಿತವಾಗುವ ಸಾಧ್ಯತೆ ಇದೆ.
ಪರಿಸರದ ಗುಣಮಟ್ಟಗಳಿಗೆ ಅನುಗುಣವಾಗಿ ನವೀಕರಿಸುವ ಯೋಜನೆಯನ್ನು ಟಾಟಾ ಮೋಟಾರ್ಸ್ ಹೊಂದಿಲ್ಲ. ಹಾಗಾಗಿ 2020ರ ವೇಳೆಗೆ ಸಣ್ಣ ಕಾರಿನ ಉತ್ಪಾದನೆ ಸ್ಥಗಿತವಾಗುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಟಾಟಾ ನ್ಯಾನೋ ಕೂಡ ಸೇರಿದೆ.
ಏಪ್ರಿಲ್ ನಲ್ಲಿ ಹೊಸ ಸುರಕ್ಷಾ ಮಾನದಂಡ ಜಾರಿಗೆ ಬರಲಿದ್ದು, 2020 ರ ವೇಳೆಗೆ ಬಿಎಸ್- VI ಜಾರಿಗೆ ಬರಲಿದೆ. ಇದಕ್ಕೆ ಹೆಚ್ಚುವರಿ ಹೂಡಿಕೆ ಮಾಡಲು ಕಂಪನಿ ಸಿದ್ಧವಿಲ್ಲ.
2009 ರಲ್ಲಿ ಕೇವಲ 1 ಲಕ್ಷ ರೂಪಾಯಿಗೆ ಭಾರತದ ಮಾರುಕಟ್ಟೆಗೆ ನ್ಯಾನೋ ಕಾರು ಬರುವ ಮೂಲಕ ಹೊಸ ಸಂಚಲನ ಮೂಡಿಸಿತ್ತು.
ಬಿಎಸ್ 6 ನಿಯಮಾವಳಿಯ ಪರೀಕ್ಷೆಯಲ್ಲಿ ನ್ಯಾನೋ ಕಾರು ಪಾಸಾಗುವುದು ಕಷ್ಟವಾಗಿದ್ದು, ನ್ಯಾನೋ ಘಟಕದ ಮೇಲೆ ಹೂಡಿಕೆ ಮಾಡದಿರಲು ಟಾಟಾ ನಿರ್ಧರಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ