Latest

ಈಜಲು ಹೋದ ಇಬ್ಬರು ಬಾಲಕರು ನೀರುಪಾಲು

ಪ್ರಗತಿವಾಹಿನಿ ಸುದ್ದಿ, ಶಿರಸಿ

ಕಾನಸೂರು ಸಮೀಪ ಈಜಲು ಹೋಗಿದ್ದ ಬಾಲಕರಿಬ್ಬರು ಸಾವಿಗೀಡಾಗಿದ್ದಾರೆ.

Home add -Advt

ಚಂದನ ದಿನೇಶ ಹೆಗಡೆ(14), ವೆಂಕಟೇಶ ಗಜಾನನ ಹೆಗಡೆ(19) ಸಾವನ್ನಪ್ಪಿದ ಬಾಲಕರು. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಸಮೀಪದ ಹಂಚಳ್ಳಿ ಗ್ರಾಮದ ಟಿಳಕದ ಗುಂಡಿಯಲ್ಲಿ ಈ ಘಟನೆ ನಡೆದಿದೆ.

ಚಂದನ ಹೆಗಡೆ ಹಂಚಳ್ಳಿ ಗ್ರಾಮದ ನಿವಾಸಿ, ವೆಂಕಟೇಶ ಗಜಾನನ ಹೆಗಡೆ ಕಬ್ಬೆ ಗ್ರಾಮದ ನಿವಾಸಿ. ನಾಲ್ವರು ಸ್ನೇಹಿತರು ಈಜಲು ತೆರಳಿದ್ದರು. ಇನ್ನಿಬ್ಬರು ದಡದ ಮೇಲೆಯೇ ಕುಳಿತಿದ್ದರು.

ಸಿದ್ದಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button