*
ಕೆ ಜಿ ಕೃಪಾಲ್, ಆರ್ಥಿಕ ಅಂಕಣಕಾರರು, ಬೆಂಗಳೂರು*.
* ಇಂದು ರೂಪಾಯಿಯ ಬೆಲೆ ಇಳಿಕೆ ಕಂಡರೂ ಸಹ ತಾಂತ್ರಿಕ ವಲಯದ ಅಗ್ರಮಾನ್ಯ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್ ಗಳು ಕುಸಿತಕಂಡಿರುವುದು ಇತ್ತೀಚಿಗೆ ಅವು ಕಂಡಿರುವ ಏರಿಕೆಯ ಕಾರಣ ಮತ್ತು ಮೂಲಾಧಾರಿತ ಪೇಟೆಯ ಚುಕ್ತಾ ಚಕ್ರದ ಅಂತಿಮ ಘಟ್ಟದಲ್ಲಿರುವ ಕಾರಣ ಲಾಭ ನಗದೀಕರಿಸುವ ಒತ್ತಡವು ಇರಬಹುದು.
* ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರತಿ ಷೇರಿಗೆ ರೂ.6.75 ರ ಲಾಭಾಂಶ ಮತ್ತು ಷೇರು ಹಿಂಕೊಳ್ಳುವುದಕ್ಕೆ ಅರ್ಹತೆಯ ನಂತರದ ಚಟುವಟಿಕೆಯಲ್ಲಿ ಕುಸಿತ ಕಂಡರೆ ಬಿಪಿಸಿಎಲ್ ಮತ್ತು ಹೆಚ್ ಪಿ ಸಿ ಎಲ್ ಗಳು ಉತ್ತಮ ಲಾಭಾಂಶಗಳ ನಿರೀಕ್ಷೆಯ ಕಾರಣ ಏರಿಕೆ ಕಂಡವು.
* ಪ್ರತಿ ಷೇರಿಗೆ ರೂ.7.25 ರ ಲಾಭಾಂಶ ಪ್ರಕಟಿಸಿದ ಕಾರಣ ಪೇಟೆಯಲ್ಲಿ ಚುರುಕಾದ ಚಟುವಟಿಕೆಯಲ್ಲಿದ್ದು, ಸೆನ್ಸೆಕ್ಸ್ 689 ಪಾಯಿಂಟುಗಳ ಕುಸಿತ ಕಂಡರೂ ಈ ಷೇರು ಸ್ವಲ್ಪ ಏರಿಕೆಯಲ್ಲಿತ್ತು.
* ಮಾರುತಿ ಸುಜುಕಿ ರೂ.272 ರಷ್ಟು ಕುಸಿತದಿಂದ ಸೆನ್ಸೆಕ್ಸ್ 36 ಪಾಯಿಂಟುಗಳಷ್ಟು, ರಿಲಯನ್ಸ್ ಇಂಡಸ್ಟ್ರೀಸ್ 29 ರೂಪಾಯಿಗಳ ಕುಸಿತದಿಂದ 93 ಪಾಯಿಂಟುಗಳಷ್ಟು, ಇನ್ಫೋಸಿಸ್ 80 ಪಾಯಿಂಟುಗಳಷ್ಟು, ಟಿಸಿಎಸ್ 63 ಪಾಯಿಂಟುಗಳಷ್ಟು ಹಾನಿ ಕಾಣಲು ಕಾರಣವಾದವು.
* ಇಂದಿನ 689 ಪಾಯಿಂಟುಗಳ ಕುಸಿತದಿಂದ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.145.46 ಲಕ್ಷ ಕೋಟಿಯಿಂದ ರೂ.143.30 ಲಕ್ಷ ಕೋಟಿಗೆ ಕರಗಿತ್ತು.
* ಪೇಟೆಯು ಏರಿಕೆಯತ್ತ ಇದ್ದ ಕಾರಣ ಇಂದಿನ ಆರಂಭಿಕ ಕ್ಷಣಗಳಲ್ಲಿ ಮಹಿಂದ್ರಾ & ಮಹಿಂದ್ರಾ, ಭಾರತಿ ಏರ್ಟೆಲ್, ಟಾಟಾ ಮೋಟಾರ್ ಷೇರುಗಳ ದರಗಳು ಹೆಚ್ಚಾಗಿದ್ದು ಕ್ರಮೇಣ ಹೆಚ್ಚಿನ ಕುಸಿತದಿಂದ ಹಾನಿಗೊಳಗಾದವು.
* ಬ್ಯಾಂಕ್ ಗಳಿಗೆ ರೂ.81 ಸಾವಿರ ಕೋಟಿ ಬಂಡವಾಳ ಒದಗಿಸುವ ವಿಚಾರಕ್ಕೆ ಪೇಟೆ ಸ್ಪಂದಿಸಲಿಲ್ಲ, ಕಾರಣ ಬ್ಯಾಂಕಿಂಗ್ ಷೇರುಗಳು ಈಗಾಗಲೇ ಹೆಚ್ಚಿನ ಏರಿಕೆಗೊಳಪಟ್ಟಿದ್ದವು.
* ಟಾಟಾ ಎಲೆಕ್ಸಿ ಜನವರಿ 8 ರಂದು, ಇನ್ಫೋಸಿಸ್ ಜನವರಿ 11 ರಂದು, ಹೆಚ್ ಡಿ ಎಫ್ ಸಿ ಬ್ಯಾಂಕ್ ಜನವರಿ 19 ರಂದು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.
* ಇಂದು ರೂಪಾಯಿಯ ಬೆಲೆ 38 ಪೈಸೆಗಳಷ್ಟು ಇಳಿಕೆ ಕಂಡಿದೆ.
ರಿಯಲ್ ಟೈಮ್ ಮೂಮೆಂಟ್ ನೊಂದಿಗೆ ಸೈಕೋ ಫಂಡಮೆಂಟಲ್ ಅನಾಲಿಸಿಸ್ ಮೂಲಕ ಪೇಟೆಯ ವಾಸ್ತವವನ್ನರಿತು ನಿರ್ಧರಿಸಿದಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಕಾಣಲು ಸಾಧ್ಯ.
ಷೇರುಪೇಟೆಯಲ್ಲಿ ಮೂಡಿರುವ ಗೊಂದಲಮಯ ವಾತಾವರಣವು, value pick ಗೆ ಅವಕಾಶವಿದ್ದು real-time ನಿರ್ಧಾರ ಒಂದೇ ಪರಿಹಾರ.
‘ ಸಾಮಾನ್ಯರ ನಡೆ – ಆರ್ಥಿಕ ಸಾಕ್ಷರತೆ ಕಡೆ ‘
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ