Karnataka NewsLatest

ಪರಿಸರ ದಿನಾಚರಣೆ: ಗಿಡ ನೆಟ್ಟ ರಮೇಶ ಜಾರಕಿಹೊಳಿ, ಕಿರಣ ಜಾಧವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನೂತನ ಜಿಲ್ಲಾ ಉಸ್ತುವಾರಿ ಸಚಿವ, ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿಯಲ್ಲಿ ಇಂದು ಗಿಡ ನೆಡುವ ಮೂಲಕ ಪರಿಸರ ದಿನ ಆಚರಿಸಿದರು.

ಇಲ್ಲಿಯ ಪ್ರವಾಸಿಮಂದಿರದ ಆವರಣದಲ್ಲಿ ಜಾರಕಿಹೊಳಿ ಸಾಂಕೇತಿಕವಾಗಿ ಗಿಡಗಳನ್ನು ನೆಟ್ಟರು. ವಿಮಲ್ ಫೌಂಡೇಶನ್ ಚೇರಮನ್, ಬಿಜೆಪಿ ಮುಖಂಡ ಕಿರಣ ಜಾಧವ ಕೂಡ ರಮೇಶ ಜಾರಕಿಹೊಳಿ ಜೊತೆ ಗಿಡ ನೆಡುವ ಮೂಲಕ ಅವರಿಗೆ ಸಾತ್ ನೀಡಿದರು.

ಅಧಿಕಾರಿಗಳು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Home add -Advt

Related Articles

Back to top button