Kannada NewsKarnataka NewsLatest

*ನಿದ್ದೆಯಲ್ಲಿದ್ದ ಪತ್ನಿಯನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಂದ ಪತಿ*

ಪ್ರಗತಿವಾಹಿನಿ ಸುದ್ದಿ: ಪತ್ನಿ ಮೇಲಿನ ಸಂಶಯಕ್ಕೆ ಪತಿ ಮಹಾಶಯನೊಬ್ಬ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.

Home add -Advt

ಇಲ್ಲಿನ ಕಟಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶೋಭಾ ಪರಗೊಂಡ ಸಾರವಾಡ (35) ಕೊಲೆಯಾದ ಮಹಿಳೆ. ಪರಗೊಂಡ ಪತ್ನಿಯನ್ನೇ ಕೊಂದ ಪತಿ. ದಂಪತಿಗೆ ಮದುವೆಯಾಗಿ ೧೫ ವರ್ಷಗಳಾಗಿವೆ. ಆದಾಗ್ಯೂ ಪತ್ನಿ ಮೇಲೆ ಅನಗತ್ಯವಾಗಿ ಅನುಮಾನಪಡುತ್ತಿದ್ದ ಪತಿ, ಪದೇ ಪದೇ ಜಗಳವಾಡುತ್ತಿದ್ದ.

ರಾತ್ರಿ ಪತ್ನಿ ಮಲಗಿದ್ದ ವೇಳೆ ಮಾರಕಾಸ್ತ್ರಗಳಿಂದ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾದ ಶೋಭಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶೋಭಾ ಕಟಗೇರಿಯ ಔಜಿಕರ ಮಠದ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಸದ್ಯ ಪತಿ ಪರಗೊಂಡನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ. ತಾಯಿ ಕೊಲೆಯಾಗಿದ್ದು, ತಮ್ದೆ ಜೈಲು ಸೇರಿದ್ದರೆ ಇತ್ತ ಇಬ್ಬರು ಮಕ್ಕಳು ಅನಾಥರಾಗಿ ಕಣ್ಣೀರಿಟ್ಟಿದ್ದಾರೆ.

Related Articles

Back to top button