Kannada NewsKarnataka NewsLatestPolitics

*ಕಾಂಗ್ರೆಸ್ ಪಕ್ಷ ಇರೋದೇ ಹಿಂದು ನಾಯಕರನ್ನ ಟಾರ್ಗೆಟ್ ಮಾಡಲು: ಛಲವಾದಿ ನಾರಾಯಣಸ್ವಾಮಿ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಪಕ್ಷ ಇರೋದೇ ಹಿಂದು ನಾಯಕರನ್ನ ಟಾರ್ಗೆಟ್ ಮಾಡಲು. ದ್ವೇಷ ಭಾಷೆ ಹೆಸರಲ್ಲಿ ಹಿಂದುತ್ವ, ಹಿಂದು ನಾಯಕರ ಹಣಿಯಲು ಕಾಂಗ್ರೆಸ್ ತೀರ್ಮಾನ ಮಾಡಿಕೊಂಡಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.‌

Home add -Advt

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೋಶಿಯಲ್ ಮೀಡಿಯಾದಲ್ಲಿ ಹಿಂದು ಕಾರ್ಯಕರ್ತರು‌ ಮೆಸೇಜ್ ಹಾಕಿದ್ರೇ. ಪೊಲೀಸರೇ ದೂರು ತೆಗೆದುಕೊಂಡು ಅರೆಸ್ಟ್ ಮಾಡಿದ ನಿದರ್ಶನ ಇವೆ. ಕಾಂಗ್ರೆಸ್ ವಿರುದ್ಧ ದೂರು ಕೊಟ್ಟರೆ ಎಫ್ಐಆರ್ ಆಗಲ್ಲ ಅರೆಸ್ಟ್ ಆಗಲ್ಲ ಎಂದು ಆರೋಪಿಸಿದರು.

ಈ ಸರ್ಕಾರ ಒಳ ಮೀಸಲಾತಿ ತರ್ತೇವಿ ಅಂತಾ ಹೇಳಿದ್ರೂ. ಒಳ ಮೀಸಲಾತಿ ಯಾವ ಆಧಾರದ ಮೇಲೆ ಕೊಟ್ರೂ? ಅನ್ನೋ ಪ್ರಶ್ನೆ ಇದೆ. ಸಂಪೂರ್ಣವಾದ ಮೀಸಲಾತಿ ಕೊಟ್ಟಿಲ್ಲ ಎಂದರು.‌

Related Articles

Back to top button