ಪ್ರಗತಿವಾಹಿನಿ ಸುದ್ದಿ, ಕಾಗವಾಡ
ಅಂತೂ ಕಾಗವಾಡಕ್ಕೆ ತಹಶಿಲ್ದಾರರ ಆಗಮನವಾಗಿದೆ. ಇದು ಪ್ರಗತಿವಾಹಿನಿ ಸುದ್ದಿ ಇಂಪ್ಯಾಕ್ಟ್.
ಕಾಗವಾಡ ತಹಸಿಲ್ದಾರರಾಗಿ ನೇಮಕಗೊಂಡಿರುವ ಪರಿಮಳಾ ದೆರಶಪಾಂಡೆ ಮಂಗಳವಾರ ಕಚೇರಿಗೆ ಹಾಜರಾಗಿದ್ದಾರೆ.
ನೇಮಕವಾಗಿ 3 ತಿಂಗಳಾದರೂ ಅವರು ಹಾಜರಾಗದಿರುವ ಕುರಿತು ಪ್ರಗತಿವಾಹಿನಿ ಭಾನುವಾರ ವರದಿ ಪ್ರಕಟಿಸಿತ್ತು. ಕೆಲಸದ ಒತ್ತಡದ ನೆಪ ಹೇಳಿ ಅವರನ್ನು ಚಿಕ್ಕೋಡಿಯ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಸಿಲ್ದಾರ ಹುದ್ದೆಯಿಂದ ಬಿಡುಗಡೆ ಮಾಡಿರಲಿಲ್ಲ.
ಮಂಗಳವಾರ ಅಧಿಕಾರ ವಹಿಸಿಕೊಂಡು ಬರ ಪರಿಸ್ಥಿತಿ ಅವಲೋಕನ ಸಭೆ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ