ಪ್ರಗತಿವಾಹಿನಿ ಸುದ್ದಿ, ಕಾಶ್ಮೀರ
ಉಗ್ರರ ದಾಳಿಗೆ 44ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಹುತಾತ್ಮರಾದ ಘಟನೆ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತಷ್ಟು ಯೋಧರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 50 ಯೋಧರು ತೆರಳುತ್ತಿದ್ದ ಬಸ್ ಅನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ. ಬಾಂಬ್ ತುಂಬಿದ್ದ ಕಾರನ್ನು ರಸ್ತೆಗೆ ಅಡ್ಡಲಾಗಿರಿಸಿ ಯೋಧರ ಬಸ್ ಬರುತ್ತಿದ್ದಂತೆ ಸ್ಪೋಟಿಸಲಾಗಿದೆ. ಸ್ಪೋಟದ ತೀವೃತೆಗೆ ಕೆಲ ಯೋಧರ ದೇಹಗಳು ಛಿದ್ರವಾಗಿವೆ. ಜೈಶೆ ಮೊಹಮ್ಮದ್ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿರುವುದಾಗಿ ತಿಳಿದುಬಂದಿದೆ.