Latest

ಕ್ಯಾಂಟೋನ್ಮೆಂಟ್ ಸಿಇಒ ದಿವ್ಯಾ ಶಿವರಾಮ ಟ್ರಾನ್ಸಫರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಇಲ್ಲಿಯ ಕ್ಯಾಂಟೋನ್ಮೆಂಟ್ ಸಿಇಒ ದಿವ್ಯಾ ಶಿವರಾಮ ಅವರನ್ನು ನವದೆಹಲಿಯ ಪ್ರಧಾನ ಮಂತ್ರಿಗಳ ಕಚೇರಿಗೆ ವರ್ಗಾಯಿಸಲಾಗಿದೆ.

ಕಳೆದ ಸುಮಾರು 2 ವರ್ಷಗಳಿಂದ ದಿವ್ಯಾ ಬೆಳಗಾವಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಅವಧಿಯಲ್ಲಿ ಬೆಳಗಾವಿ ಕ್ಯಾಂಟೋನ್ಮೆಂಟ್ ಉತ್ತಮ ರಿತಿಯಲ್ಲಿ ಕೆಲಸ ಮಾಡುವ ಮೂಲಕ ಜನಪರ ಬೋರ್ಡ್ ಎನಿಸಿದೆ. ವಿಶೇಷವಾಗಿ ಜನರಿಗೆ ಹತ್ತಿರವಾಗಿ, ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಕ್ಯಾಂಟೋನ್ಮೆಂಟ್ ಬೋರ್ಡ ಮತ್ತು ಇತರ ಸ್ಥಳೀಯಾಡಳಿತ ಸಂಸ್ಥೆಗಳು ಹತ್ತಿರವಾಗಿ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಿದೆ.

Home add -Advt

ಜೂನ್ 15ರ ಹೊತ್ತಿಗೆ ದಿವ್ಯಾ ಬೆಳಗಾವಿಯಿಂದ ಬಿಡುಗಡೆಯಾಗುವ ನಿರೀಕ್ಷಿಯಿದೆ. ದಿವ್ಯಾ ಅವರ ಪತಿ ಶ್ರೇಯಸ್ ಹೊಸೂರ್ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಕೇವಲ ಒಂದೂವರೆ ವರ್ಷದ ಹಿಂದಷ್ಟೆ ಅವರ ವಿವಾಹವಾಗಿದೆ.

ಎಲ್ಲರಿಗಿಂತ ಭಿನ್ನವಾದ ಅಧಿಕಾರಿ ದಿವ್ಯಾ ಎನ್ನುವ ಈ ಹೆಣ್ಣು ಮಗಳು

Related Articles

Back to top button