ಪ್ರಗತಿವಾಹಿನಿ ಸುದ್ದಿ, ಘಟಪ್ರಭ
ಘಟಪ್ರಭದಿಂದ ಗೋಕಾಕಕ್ಕೆ ಹೋಗುತ್ತಿದ್ದ ಖಾಸಗಿ ಲಕ್ಷುರಿ ಮಿನಿ ಬಸ್ ಬೆಳಿಗ್ಗೆ 10:30ಕ್ಕೆ ಘಟಪ್ರಭ ಸಕ್ಕರೆ ಕಾರ್ಖಾನೆ ಸಮೀಪ ಪಲ್ಟಿಯಾಗಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕರಿ ಅಮ್ಮ ದೇವರ ಗುಡಿಯ ಹತ್ತಿರ ಈ ಘಟನೆ ನಡೆದಿದೆ. ವಾಹನದಲ್ಲಿದ್ದ ಬಹುತೇಕ ಜನರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಎಲ್ಲರನ್ನೂ ಗೋಕಾಕ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ. ಘಟಪ್ರಭ ಪೋಲಿಸರು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ