Latest

ಚಿಕ್ಕೋಡಿ ಪಟ್ಟಣದಲ್ಲಿ ಮತ ಯಾಚಿಸಿದ ಮಹಾಂತೇಶ ಕವಟಗಿಮಠ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಶುಕ್ರವಾರ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ ಜೊಲ್ಲೆ ಪರ ಪ್ರಚಾರ ನಡೆಸಿದರು.

ಚಿಕ್ಕೋಡಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡೆಗಳಲ್ಲಿ ಮತಯಾಚನೆ ಮಾಡಿ, ಕೇಂದ್ರದ ಬಿಜೆಪಿ ಸರಕಾರದ ಯೋಜನೆಗಳನ್ನು ವಿವರಿಸಿದರು. ಈ ವೇಳೆ ವೃದ್ದೆಯೊಬ್ಬಳು ಸ್ವಯಂ ಸ್ಫೂರ್ತಿಯಿಂದ ಮುಂದೆ ಬಂದು ನರೇಂದ್ರ ಮೋದಿ ಚಿತ್ರವಿರುವ ಪ್ರಚಾರ ಫಲಕ ಹಿಡಿದು, ತನ್ನ ಮತ ಇವರಿಗೇ ಎಂದು ಹೇಳಿದ್ದು ವಿಶೇಷವಾಗಿತ್ತು. 

ಪುರಸಭೆ ಸದಸ್ಯ ನಾಗರಾಜ ಮೇದಾರ, ಮಾಜಿ ಉಪಾಧ್ಯಕ್ಷ ಅಕ್ರಮ ಅರ್ಕಾಟೆ, ಚಂದು ಬುರುಡ, ಅನ್ನದಾನೇಶ್ವರ ವಂಟಮುತ್ತೆ, ಸಿದ್ದರಾಮ ಮುಂಡೆ, ಬಸವರಾಜ ಅಮಾತೆ, ಬಾಳು ಸಿಂಗಟೆ, ಮಡಿವಾಳಪ್ಪ ಬಸರಗಿ, ಅಪ್ಪಾಸಾಬ್ ನಾಯಿಕ ಮೊದಲಾವರು ಜೊತೆಗಿದ್ದರು 

Home add -Advt

Related Articles

Back to top button