ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ-
ಪಟ್ಟಣದ ಕೋಲಕಾರ ಗಲ್ಲಿ ನಿವಾಸಿ, ಪ್ರಸಿದ್ಧ ಜಲತಜ್ಞ ಸೋಮಶೇಖರ ಶಂಕರೆಪ್ಪ ಕೋಲಕಾರ ಉರ್ಫ ಸುಣಗಾರ (೩೮) ಬುಧವಾರ ನಿಧನರಾದರು. ಅವರಿಗೆ ತಾಯಿ, ಪತ್ನಿ, ಪುತ್ರ ಇದ್ದಾರೆ.
ಮೃತರು ಪಟ್ಟಣದ ಡಾ.ರಾಮಣ್ಣವರ ಚಾರಿಟೆಬಲ್ ಟ್ರಸ್ಟ್ ಮುಖಾಂತರ ಬೆಳಗಾವಿಯ ಕೆ.ಎಲ್.ಇ. ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರ ಭಂಡಾರಕ್ಕೆ ಕಣ್ಣನ್ನು ದಾನವಾಗಿ ನೀಡಿದ್ದಾರೆ. ನೇತ್ರದಾನ ಮಾಡುವ ಮೂಲಕ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ.
ಕೆ.ಎಲ್.ಇ. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ. ವ್ಹಿ. ಜಾಲಿ, ನೇತ್ರ ಭಂಡಾರದ ವೈದ್ಯ ಅರವಿಂದ ತೆನಗಿ ಹಾಗೂ ಡಾ.ರಾಮಣ್ಣವರ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ಡಾ.ಸುಶೀಲಾದೇವಿ ರಾಮಣ್ಣವರ ನೇತ್ರದಾನಕ್ಕೆ ಸಹಕರಿಸಿದ ಕೋಲಕಾರ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ