Latest

ಜಿಐಟಿಯಲ್ಲಿ ರಕ್ತದಾನ ಶಿಬಿರ, 300ಕ್ಕೂ ಅಧಿಕ ಜನರಿಂದ ರಕ್ತದಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ 
ನಗರದ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಾಲೇಜಿನ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಸೋಸಿಯೇಶನ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಗಳ ಜಂಟಿ ಆಶ್ರಯದಲ್ಲಿ ಕೆಎಲ್‌ಇ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಜಿಐಟಿಯ ಕಟ್ಟಡ ಮತ್ತು ನಿರ್ವಹಣಾ ವಿಭಾಗದ ಡೀನ್ ಡಾ. ಎಸ್.ಬಿ. ಹಾಲಭಾವಿ ಶಿಬಿರ ಉದ್ಘಾಟಿಸಿದರು. ಶಿಬಿರದ ಸಂಯೋಜಕ ಡಾ. ಡಿ.ಆರ್. ಜೋಶಿ, ಪ್ರೊ. ಎಂ.ಪಿ. ಶೆಣೈ, ಪ್ರೊ. ರಮೇಶ ಭಗತ್, ಪ್ರೊ. ಕಿರಣ ಥಬಾಜ, ಪಿ.ವಿ. ಕಡಗದಕೈ ಹಾಜರಿದ್ದರು. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿ ೩೦೦ ಕ್ಕಿಂತ ಹೆಚ್ಚು ಜನ ರಕ್ತದಾನ ಮಾಡಿದರು. 

Related Articles

Back to top button