Latest

ಡಿಇಬಿಎಂ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ರಿಪೋರ್ಟ್ ಸಿದ್ಧತೆ ಕಾರ್ಯಾಗಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೆಎಲ್‌ಎಸ್ ಐಎಂಇಆರ್ ಸಂಸ್ಥೆಯ ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರವು  ಹೊಸ ಉದ್ಯಮ ಅವಕಾಶಗಳ ಗುರುತಿಸುವಿಕೆ ಹಾಗೂ ವಿವರವಾದ ಬಿಸನೆಸ್ ಪ್ಲ್ಯಾನ್ ತಯಾರಿಸುವಿಕೆ ಕುರಿತು ಅಹಮದಾಬಾದ್‌ನ ಭಾರತೀಯ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆ (ಇಡಿಐಐ) ಸಹಯೋಗದಲ್ಲಿ ಒಂದು ದಿನದ ಕಾರ್ಯಾಗಾರ ಹಮ್ಮಿಕೊಂಡಿತ್ತು.

ಸಂಸ್ಥೆಯ ಒಂದು ವರ್ಷದ ಡಿಪ್ಲೊಮಾ ಇನ್ ಎಂತ್ರಾಪ್ರೆನ್ಯೂರ್‌ಶಿಪ್ ಆಂಡ್ ಬಿಸಿನೆಸ್ ಮ್ಯಾನೆಜ್‌ಮೆಂಟ್ (ಡಿಇಬಿಎಂ) ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಯಶಸ್ವಿ ನಾಗ್, ಉದ್ಯಮದ ಸ್ವರೂಪ ಯೋಚಿಸುವಿಕೆ ಹಾಗೂ ಹೊಸ ಉದ್ಯಮಗಳ ಯೋಜನೆಗಳ ಬಗ್ಗೆ ವಿವರಿಸಿದರು. ಇದಲ್ಲದೆ ಬಂಡವಾಳ ಹಾಗೂ ಸಾಲ ಪಡೆಯಲು ಸಿಡ್‌ಬಿ (ಸಣ್ಣ ಉದ್ಯಮೆಗಳ ಬ್ಯಾಂಕ್ ಆಫ್ ಇಂಡಿಯಾ) ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ವಿವರವಾದ ಪ್ರಾಜೆಕ್ಟ್ ರಿಪೋರ್ಟ್ ತಯಾರಿಸುವ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
ವಿದ್ಯಾರ್ಥಿಗಳು ತಂಡದಲ್ಲಿ ವಿವಿಧ ಉದ್ಯಮ ಅವಕಾಶಗಳು ಹಾಗೂ ವಿವರವಾದ ಪ್ರಾಜೆಕ್ಟ್ ರಿಪೋರ್ಟ್ ಕರಡು ಪ್ರತಿ ಸಿದ್ಧಪಡಿಸಿದರು.
ಕೆಎಲ್‌ಎಸ್ ಐಎಂಇಆರ್ ನಿರ್ದೇಶಕ  ಡಾ. ಅತುಲ್ ದೇಶಪಾಂಡೆ ಮಾತನಾಡಿ, ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು. ಡಾ. ಪೂರ್ಣಿಮಾ ಚರಂತಿಮಠ ಶಿಬಿರವನ್ನು ಸಂಯೋಜಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button