ಪ್ರಗತಿವಾಹಿನಿ ಸುದ್ದಿ, ಹಳಿಯಾಳ
ಸರಾಯಿ ಕುಡಿದ ಅಮಲಿನಲ್ಲಿ ತಾಯಿಯೊಂದಿಗೆ ಜಗಳ ಮಾಡಿ ಕೋಲಿನಿಂದ ಹೊಡೆದು ತಾಯಿಯನ್ನೇ ಕೊಂದಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಪಟ್ಟಣದಲ್ಲಿ ನಡೆದಿದೆ.
ಹಳಿಯಾಳದ ಸಿದ್ದರಾಮೇಶ್ವರಗಲ್ಲಿ ನಿವಾಸಿ ಭೀಮವ್ವ ರುಕ್ಮಣ್ಣ ಅಮರಾಪುರ (80) ಮೃತ ದುರ್ದೈವಿಯಾಗಿದ್ದಾರೆ. ಅಣ್ಣಪ್ಪ ಅಮರಾಪುರ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಸರಾಯಿ ಕುಡಿದ ಅಮಲಿನಲ್ಲಿ ಹಣದ ವಿಷಯಕ್ಕೆ ತಾಯಿಯೊಂದಿಗೆ ಜಗಳವಾಡಿ ಕೋಲಿನಿಂದ ತಲೆಗೆ,ಕಾಲಿಗೆ ಹೊಡೆದ ಪರಿಣಾಮ ಭೀಮವ್ವ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಕುರಿತು ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.