ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಜಿಲ್ಲೆಯ ಪಬ್ಲಿಕ್ ಟಿವಿಯ ಹಿರಿಯ ವರದಿಗಾರ ದಿಲೀಪ್ ಕುರಂದವಾಡೆ ಅವರ ತಾಯಿ ಸತ್ತ್ಯವ್ವ ಸಿದ್ದಪ್ಪಾ ತಂಗೆವಗೋಳ( ಕುರಂದವಾಡೆ) ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
38 ವರ್ಷಗಳ ಕಾಲ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ಅವರು ವಯೋ ಸಹಜ ಕಾಯಿಲೆಯಿಂದ ಹುಕ್ಕೇರಿ ಸ್ವ ಗೃಹದಲ್ಲಿ ಗುರುವಾರ ಸಂಜೆ 5:15 ಕ್ಕೆ ವಿಧಿ ವಶರಾದರು.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಹುಕ್ಕೆರಿಯ ಎಲಿಮುನ್ನೋಳಿ ರಸ್ತೆಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ಜರುಗಲಿದೆ
ಇಬ್ಬರು ಮಕ್ಕಳು, ಸೊಸೆಯಂದಿಯರು ಐದು ಜನ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನ ಅವರು ಅಗಲಿದ್ದಾರೆ.