Latest

ನಾಳೆಯಿಂದ ಸೀಮೆ ಕರೆಮ್ಮಾದೇವಿ ಜಾತ್ರೆ, ವಿವಿಧ ಕಾರ್ಯಕ್ರಮಗಳು

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:

ತಾಲೂಕಿನ ಕುಲಗೋಡ ಹಾಗೂ ಕೌಜಲಗಿ ಗ್ರಾಮದ ಶ್ರೀ ಸೀಮೆ ಕರೆಮ್ಮಾದೇವಿ ೧೪ ನೇ ಜಾತ್ರಾ ಮಹೋತ್ಸವ ಮಾ. ೨೫ ಹಾಗೂ ೨೬ರಂದು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಶ್ರ್ರೀ ಶಿವಾನಂದ ಸ್ವಾಮಿಜಿ ಮತ್ತು ಕೌಜಲಗಿಯ ಶ್ರೀ ವಿಠ್ಠಲ ದೇವಋಷಿಗಳ ನೇತೃತ್ವದಲ್ಲಿ ಅತೀ ವಿಜೃಂಭಣೆಯಿಂದ ಜರುಗಲಿದೆ.

.

ಮಾ.೨೫ ರಂದು ಮುಂಜಾನೆ ೮ ಕ್ಕೆ ಮಹಾಭಿಷೇಕ ಹಾಗೂ ಮಹಾಮಂಗಳಾರುತಿ ಮಧ್ಯಾಹ್ನ ೧೨ ಗಂಟೆಗೆ ಮಹಾಪ್ರಸಾದ. ನಂತರ ಹಾಲು ಹಲ್ಲಿನ, ಎರಡು ಹಲ್ಲಿನ, ನಾಲ್ಕು ಹಲ್ಲಿನ, ಮತ್ತು ಓಪನ್ ಟಗರು ಕಾಳಗ ಸ್ಪರ್ಧೆಗಳು ಜರುಗಲಿದೆ. ರಾತ್ರಿ ೧೦ಕ್ಕೆ ಪಂಚಾಕ್ಷರಿ ಗವಾಯಿ ಮೆಲೋಡಿಸ್ ಆರ್ಕೇಷ್ಟ್ರಾ ಕೌಜಲಗಿ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
ಮಾ.೨೬ ರಂದು ಮುಂಜಾನೆ ೮ ಕ್ಕೆ ದೇವಿಯ ಪೂಜೆ, ಗ್ರಾಮಸ್ಥರಿಂದ ನೈವೇಧ್ಯ ನಂತರ ಮಹಾಪ್ರಸಾದ. ೧೧ ಕ್ಕೆ ತೆರೆ ಬಂಡಿ ಶರ್ಯತ್ತು ನಡೆಯಲಿದೆ. ಪ್ರಥಮ ೧೨ ಗ್ರಾಂ ಬಂಗಾರ, ದ್ವಿತೀಯ ೯ ಗ್ರಾಂ ಬಂಗಾರ, ತೃತೀಯ ೭ ಗ್ರಾಂ ಬಂಗಾರ, ಚತುರ್ಥ ೫ ಗ್ರಾಂ ಬಂಗಾರ ಬಹುಮಾನ ನೀಡಲಾಗುವದು ಎಂದು ಶ್ರೀ ಸೀಮೆ ಕರೆಮ್ಮಾದೇವಿ ಜಾತ್ರಾ ಕಮೀಟಿ ಅಧ್ಯಕ್ಷ ರಾಮಣ್ಣಾ ಕುರುಬಚನ್ನಾಳ, ವ್ಯವಸ್ಥಾಪಕ ಈರಪ್ಪ ಕುಂದರಗಿ ತಿಳಿಸಿದ್ದಾರೆ.

Home add -Advt

ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ೯೯೭೨೬೧೬೬೩೦, ೯೬೬೩೫೮೨೯೯೮, ೯೧೬೪೮೯೯೪೭೦, ೯೯೦೨೭೯೦೯೩೩ ಸಂಪರ್ಕಿಸಲು ಕೋರಲಾಗಿದೆ.

Related Articles

Back to top button