ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮತದಾನ ಪ್ರಮಾಣ ಹೆಚ್ಚಿಸುವ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಉಂಟು ಮಾಡು ಉದ್ದೇಶದಿಂದ ಸ್ವೀಪ್ ಸಮಿತಿ ಮತ್ತು #BelagaviVotes100% ಸಂಯುಕ್ತವಾಗಿ ನಾಳೆ ಬೆಳಗ್ಗೆ 5 ಕಿಮೀ ವಾಕಥಾನ್ ಸಂಘಟಿಸಿವೆ.
ಕುಟುಂಬ ಮತ್ತು ಮಿತ್ರರೊಂದಿಗೆ ಈ ವಾಕಥಾನ್ ನಲ್ಲಿ ಭಾಗವಹಿಸಬಹುದಾಗಿದ್ದು, ಸಿಪಿಎಡ್ ಮೈದಾನದಿಂದ ಬೆಳಗ್ಗೆ 6.30ಕ್ಕೆ ಆರಂಭವಾಗಲಿದೆ. ಅಂದು ಬೆಳಗ್ಗೆ 6 ಗಂಟೆಗೆ ಎಲ್ಲರೂ ಬಂದು ಸೇರುವಂತೆ ಸಂಘಟಕರು ಕೋರಿದ್ದಾರೆ.
ಭಾಗವಹಿಸಲು ಆಸಕ್ತರು https://bit.ly/2OCe5Cz ಈ ಲಿಂಕ್ ಮೂಲಕ ಹೆಸರು ನೊಂದಯಿಸಬಹುದು. ವಾಕಥಾನ್ ನಲ್ಲಿ ಭಾಗವಹಿಸಿದವರಿಗೆ ಅಂಬಾಸಿಡರ್ ಆಫ್ ಡೇಮಾಕ್ರಸಿ ಎನ್ನುವ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಟಿ ಶರ್ಟ್, ಹಣ್ಣು, ನೀರು, ಲಘು ಉಪಹಾರವನ್ನೂ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗೆ. ಕಿರಣ್ ನಿಪ್ಪಾಣಿಕರ್ 9742667777, ಮಯೂರ್ ಶಿವಳಕರ್ 84313 88088, ಮುಖುಲ್ ಚೌದರಿ 94483 04215, ಕೀರ್ತಿ ಟೆಂಬೆ 99720 03109 ಅವರನ್ನು ಸಂಪರ್ಕಿಸಬಹುದು.
https://pragati.taskdun.com ವಾಕಥಾನ್ ಗೆ ಸಂಪೂರ್ಣ ಬೆಂಬಲ, ಸಹಕಾರ ನೀಡಲಿದೆ.
Walkathon in Belagavi to sensitise voters