Latest

ಪೆಟ್ರೋಲ್ ಜೊತೆ ಡೀಸೆಲ್ ಮಿಕ್ಸ್?; ಸಿಡಿದೆದ್ದ ಗ್ರಾಹಕರು

ಪ್ರಗತಿವಾಹಿನಿ ಸುದ್ದಿ, ಅಥಣಿ :
ಪೆಟ್ರೋಲ್ ಜೊತೆ ಡಿಸೆಲ್ ಮಿಕ್ಸ್ ಮಾಡಿ ವಾಹನಗಳಿಗೆ ತುಂಬಲಾಗುತ್ತಿದೆ ಎಂದು ಆರೋಪಿಸಿದ ಗ್ರಾಹಕರು ಪೆಟ್ರೋಲ್ ಬಂಕ್ ಮಾಲಿಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಥಣಿ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಇರುವ ಪಂಪ್ ನಲ್ಲಿ ಈ ಘಟನೆ ನಡೆದಿದ್ದು ಕಳೆದ ಎರಡು ದಿನಗಳಿಂದ ಡಿಸೇಲ್ ಮಿಶ್ರಿತವಾದ ಪೆಟ್ರೋಲ್ ನೀಡುತ್ತಿದ್ದು, ಸಾವಿರಾರು ಸವಾರರು ಪರದಾಡುವಂತಾಗಿದೆ. ಕೆಲವು ವಾಹನಗಳು ಸ್ಟಾರ್ಟ್ ಆಗದೆ ಒದ್ದಾಡುವಂತಾಗಿದೆ.
ಇಂದು ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನೆಗಿಳಿದಾಗ ಸ್ಥಳಕ್ಕೆ ಆಗಮಿಸಿದ್ದ ಕಾಗವಾಡ ಪೊಲೀಸರು ಅನ್ಯಾಯಕ್ಕೊಳಗಾದವರು ಠಾಣೆಗೆ ಬಂದು ದೂರು ನೀಡುವಂತೆ ಹೇಳಿದರಾದರೂ, ಮಾಲಿಕನನ್ನು ಸ್ಥಳಕ್ಕೆ ಕರೆಸುವ ಪ್ರಯತ್ನ ಮಾಡಲಿಲ್ಲ. ಇದು ಗ್ರಾಹಕರನ್ನು ಇನ್ನಷ್ಟು ಕೆರಳಿಸಿತು.
ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಬೇಕು, ಸಂಬಂಧಿಸಿದ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ ಗ್ರಾಹಕರು, ತಾವು ದೂರು ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಕೆಲಹೊತ್ತು ಪ್ರತಿಭಟಿಸಿದ ಗ್ರಾಹಕರು, ಅಧಿಕಾರಿಗಳು ಕ್ರಮಕ್ಕೆ ಆಸಕ್ತಿ ತೋರದ್ದರಿಂದ ಈ ಪಂಪ್ ಸಹವಾಸವೇ ಸಾಕು ಎನ್ನುತ್ತ ತೆರಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button