Latest

ಪೊಲೀಸ್‌ ಊಟದ ಗುಣಮಟ್ಟವನ್ನು ಪರಿಶೀಲಿಸಿದ ಡಾ.ಜಿ. ಪರಮೇಶ್ವರ್

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಸುವರ್ಣಸೌಧ ಅಧಿವೇಶನದಲ್ಲಿ ಪೊಲೀಸ್‌ ಸಿಬ್ಬಂದಿ‌ಗೆ ನೀಡುತ್ತಿರುವ ಮಧ್ಯಾಹ್ನದ ಊಟದ ಗುಣಮಟ್ಟವನ್ನು ಖುದ್ದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರೇ ಪರಿಶೀಲಿಸಿದರು. 
ಬೆಳಗಾವಿ ಅಧಿವೇಶನ ಸರಾಗವಾಗಿ ನಡೆಯುವುದು, ಇಲ್ಲಿನ ಪ್ರತಿಭಟನಾಕಾರರನ್ನು ನಿಯಂತ್ರಿಸುವುದು ಸೇರಿದಂತೆ ಸುರಕ್ಷತೆ, ಭದ್ರತೆ ಕಾಪಾಡಲು ಹಗಲು, ರಾತ್ರಿ ಶ್ರಮಿಸುತ್ತಿದ್ದಾರೆ. ಪ್ರತಿಬಾರಿ ಪೊಲೀಸರಿಗೆ ಸಮರ್ಪಕ ಊಟದ ವ್ಯವಸ್ಥೆ ಮಾಡದೆ ಹೈರಾಣಾಗುತ್ತಿದ್ದರು. 
ಹಾಗಾಗಿ ಈ ಬಾರಿಯ ವ್ಯವಸ್ಥೆಯನ್ನು ಪರಮೇಶ್ವರ್‌ ಅವರು ಪರಿಶೀಲಿಸಿದರು. ಪೊಲೀಸ್‌ ಸಿಬ್ಬಂದಿಗೆ ಊಟ ವಿತರಿಸುವ ಸ್ಥಳಕ್ಕೆ ದಿಢೀರ್‌ ಭೇಟಿ ನೀಡಿದ ಅವರು, ಸ್ವತಃ ತಾವೂ ಊಟ ಮಾಡಿದರು. ಇಲ್ಲಿ ನೀಡುತ್ತಿರುವ ಊಟದ ಗುಣಮಟ್ಟದ ಬಗ್ಗೆ ಪೊಲೀಸ್‌ ಸಿಬ್ಬಂದಿ ಬಳಿ ಮಾಹಿತಿ ಪಡೆದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button