ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪಲ್ಸ್ ಪೋಲಿಯೊ ಹನಿ ಹಾಕಿಸಿಕೊಳ್ಳುವಂತೆ ಕಳೆದ ಒಂದು ತಿಂಗಳಿನಿಂದ ಸಾಕಷ್ಟು ಪ್ರಚಾರ ನಡೆಸಲಾಗುತ್ತಿದೆ. ಆದರೆ ಬೆಳಗಾವಿಯ ಕೆಲವು ಪ್ರದೇಶಗಳಿಗೆ ಪೋಲಿಯೊ ಹನಿಯೇ ತಲುಪಿಲ್ಲ.
ಇಲ್ಲಿಯ ವಡಗಾವಿ ಪ್ರದೇಶಕ್ಕೆ 9 ಗಂಟೆಯವರೆಗೂ ಪೋಲಿಯೊ ಹನಿ ಪ್ಯಾಕ್ ಬರದೆ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.
ಇಲ್ಲಿಯ ನಾಥ ಪೈ ನಗರ ಮತ್ತು ಗಾಂಧಿ ಸ್ಮಾರಕ ಬೂತ್ ಗಳಿಗೆ ಪೋಲಿಯೊ ಹನಿ ಬಂದಿಲ್ಲ ಇದು ಸಂಬಂಧಿಸಿದ ಸಿಬ್ಬಂದಿಯ ನಿರ್ಲಕ್ಷ್ಯ ಎಂದು ಉದ್ಯಮಿ ಚೈತನ್ಯ ಕುಲಕರ್ಣಿ ಆರೋಪಿಸಿದ್ದಾರೆ.
ಹನುಮಾನ್ ನಗರದ ಹನುಮಾನ್ ಟೆಂಪಲ್ ನಲ್ಲಿ ನಗರಸೇವಕಿ ಅನುಶ್ರೀ ದೇಶಪಾಂಡೆ ಪೋಲಿಯೊ ಹನಿ ಕಾರ್ಯಕ್ರಮ ಉದ್ಘಾಟಿಸಿದರು.