Latest

ಪ್ರೊ.ಭಗವಾನ್ ಗಡಿಪಾರು ಮಾಡಿ- ಕ್ಷತ್ರೀಯ ವಿಕಾಸ ಪರಿಷತ್‌ ಆಗ್ರಹ

 

 

    ಪ್ರಗತಿವಾಹಿನಿ ಸುದ್ದಿ, ಮೂಡಲಗಿ
ಹಿಂದೂ ದೇವತೆಗಳ ಮತ್ತು ಶ್ರೀರಾಮನನ್ನು ಪದೇ ಪದೇ ಅವಮಾನಿಸಿ ಮಾತನಾಡುತ್ತಿರುವ ಸಾಹಿತಿ ಪ್ರೊ.ಭಗವಾನ್ ಅವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಮೂಡಲಗಿ ಕ್ಷತ್ರೀಯ ವಿಕಾಸ ಪರಿಷತ್‌ ಆಗ್ರಹಿಸಿದೆ.
ಈ ಕುರಿತು ಆನಂದರಾವ್ ನಾಯ್ಕ ನೇತೃತ್ವದಲ್ಲಿ ಶಿರಸ್ತೇದಾರ ಎಸ್.ಎ.ಬಬಲಿ ಮೂಲಕ ಮುಖ್ಯಮಂತ್ರ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಾಹಿತಿ ಭಗವಾನ್ ಪದೇ ಪದೇ ಹಿಂದೂ ದೇವತೆಗಳ ಕುರಿತು ಹಾಗೂ ಹಿಂದುಗಳ ಆರಾಧ್ಯ ದೈವ ಶ್ರೀರಾಮಚಂದ್ರನ ಕುರಿತು ಅವಹೇಳನಕಾರಿಯಾದ ಹೇಳಿಕೆ ನೀಡುತ್ತಿರುವುದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ. ವಿಶ್ವದ ಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತ, ಭಗವದ್ಗೀತೆಯನ್ನು ನಾವು ಜೀವನದ ಮಾರ್ಗದರ್ಶಕಗಳಾಗಿ ಸ್ವೀಕರಿಸಿ ಜೀವನ ನಡೆಸುತ್ತಿದ್ದೇವೆ. ಆದರೆ ಭಗವಾನ್ ಅವರು ಇಲ್ಲ ಸಲ್ಲದ ಕತೆ ಹುಟ್ಟು ಹಾಕಿ ಪದೇ ಪದೇ ಶ್ರೀರಾಮಚಂದ್ರರ ಕುರಿತು ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಆದರಿಂದ ಕೂಡಲೇ ಅವರ ಮೇಲೆ ಕಠಿಣ ಕ್ರಮ ಕೈಕೊಂಡು ಅವರಿಗೆ ಸರ್ಕಾರದಿಂದ ಸಿಗುತ್ತಿರುವ ಎಲ್ಲಾ ರೀತಿಯ ಸೌಲತ್ತುಗಳನ್ನು ನಿಲ್ಲಿಸಬೇಕು ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದನ್ನು ಪರಿಗಣಿಸಿ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಲಾಯಿತು.

ಈ ಸಂಧರ್ಭದಲ್ಲಿ ಪಾಂಡು ನಾಯ್ಕ, ರಾಘು ಪಾಟೀಲ್, ನಿಂಗಪ್ಪಾ ಚಿನ್ನಾಕಟ್ಟಿ, ಈರಪ್ಪಾ ಖೋತ, ಸುರೇಶ ನಾಯ್ಕ, ಯಲ್ಲಪ್ಪಾ ಜಿರ್ಲೆ, ವಿಠ್ಠಲ ಬಾ. ನಾಯ್ಕ , ರಾಮಣ್ಣಾ ನಾಯ್ಕ, ರಾಜು ಬೆಳಕೂಡ, ಕೃಷ್ಣಾ ಪೂಜೇರಿ, ಮಂಜುನಾಥ ಕಡಾರಿ, ನವೀನ ನಿಶಾನಿಮಠ, ಸಿಂಧೂರ ನಾಯ್ಕ, ಸಿದ್ದಪ್ಪಾ ನಾಯ್ಕ, ಚನ್ನಪ್ಪಾ ಬಳಿಗಾರ, ಮಹಾದೇವ ನಾಯ್ಕ , ವಿಠ್ಠಲ ರ. ನಾಯ್ಕ, ಸಂತೋಶ ನಾಯ್ಕ ಶಶಿಧರ ಪೂಜೇರಿ, ಹಣಮಂತ ದಳವಾಯಿ ಮತ್ತಿತರರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button