Latest

*ಫೈನಾನ್ಸ್ ಸಿಬ್ಬಂದಿಗಳಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಆರೋಪ* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ವಾಯಾ ಎಂಬ  ಖಾಸಗಿ ಫೈನಾನ್ ನವರು ವಾರದ ಕಂತಿಗಾಗಿ ಪ್ರಮೋದ ಸಿಂಗೆ ಅವರ ಮನೆಗೆ  ಆಗಮಿಸಿದ್ದಾರೆ. ಮನೆಯಲ್ಲಿ ಯಾರೂ  ‌ಇಲ್ಲದ ಕಾರಣ ಮರಳಿ‌ ಹೋಗುವಾಗ ವಿದ್ಯಾನಗರದಲ್ಲಿ ಪ್ರಮೋದ ಸಿಂಗೆ ಸಿಕ್ಕಿದ್ದ .ಈ ಸಂದರ್ಭದಲ್ಲಿ ಹಲ್ಲೆ ಮಾಡಿ ಓಡಿಹೋಗಿದ್ದಾರೆ ಎಂದು ವಾಯಾ ಫೈನಾನ್ಸ್ ಸಿಬ್ಬಂದಿಗಳ ಮೇಲೆ ಗಂಭೀರ ಆರೋಪವನ್ನ ಮಾಡಿದ್ದಾರೆ.

ಹಣವನ್ನು ತುಂಬುವಂತೆ ಕೇಳಿದ್ರು, ಆ ಸಂದರ್ಭದಲ್ಲಿ ನನ್ನ ಹತ್ತಿರ ಸದ್ಯ ಹಣವಿಲ್ಲ, ನಾಳೆ ಹನ್ನೊಂದು ಗಂಟೆಯೊಳಗಾಗಿ ತುಂಬುತ್ತೇನೆ, ದಯವಿಟ್ಟು ಸಹಕರಿಸಿ ಎಂದು ಬೇಡಿಕೊಂಡೆ, ಅದಕ್ಕೆ ವಾಯಾ ಫೈನಾನ್ಸ್ ಸಿಬ್ಬಂದಿ ಆವಾಚ್ಯವಾಗಿ ನಿಂದಿಸಿದ್ದಲ್ಲದೆ ಮನಬಂದಂತೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಸ್ಥಳದಿಂದ ಓಡಿ ಹೋಗಿದ್ದಾರೆ ಎಂದು ಪ್ರಮೋದ ಸಿಂಗೆ ಆರೋಪ ಮಾಡಿದ್ದಾರೆ.

Related Articles

Back to top button