ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು:
ಡಿಸೇಲ್ ಟ್ಯಾಂಕ್ ಒಡೆದು ವಾಹನದಲ್ಲಿ ಬೆಂಕಿ ಹತ್ತಿಕೊಂಡು ವಾಹನ ಸುಟ್ಟು ಕರಕಲಾದ ಘಟನೆ ರವಿವಾರ ಮಧ್ಯರಾತ್ರಿ ನಡೆದಿದೆ.

ತಾಲೂಕಿನ ಉಗರಖೋಡ ಕ್ರಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಧಾರವಾಡದಿಂದ ಬೆಳಗಾವಿಗೆ ಪಾರ್ಸಲ್ ತೆಗೆದುಕೊಂಡು ತೆರಳುತ್ತಿದ್ದ ವಾಹನ ಡಿಸೇಲ್ ಟ್ಯಾಂಕ್ ಒಡೆದ ಪರಿಣಾಮ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ವಾಹನ ಸುಟ್ಟು ಕರಕಲಾಗಿದ್ದು, ವಾಹನದಲ್ಲಿ ಇದ್ದ ವಸ್ತುಗಳು ಸಹ ಬೆಂಕಿಗೆ ಆಹುತಿಯಾಗಿವೆ.

ಚಿಕ್ಕಮಂಗಳೂರಿನ ಕೆಂಪನಹಳ್ಳಿಯ ಚಾಲಕ ಕೃಷ್ಣಾ ಪವಾರ್ ಗೆ ಗಾಯಗಳಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.


