ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನಗರದ ಖಂಜರ್ ಗಲ್ಲಿ ಸೇರಿದಂತೆ ಕೆಲವು ಪ್ರದೇಶದಲ್ಲಿ ಸೋಮವಾರ ರಾತ್ರಿ 11ರ ವೇಳೆಗೆ ಕಲ್ಲು ತೂರಾಟ ನಡೆದಿದ್ದು, ತ್ವೇಷಮಯ ವಾತಾವರಣ ಉಂಟಾಯಿತು.
ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ಕ್ಷಣ ಮಾತ್ರದಲ್ಲಿ ನಾಪತ್ತೆಯಾಗಿದ್ದು, ಸುದ್ದಿ ತಿಳಿದ ಎಸಿಪಿ ಎನ್.ವಿ.ಬರ್ಮನಿ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದರಾದರೂ ಯಾರೂ ಕೈಗೆ ಸಿಗಲಿಲ್ಲ. ಘಟನೆ ನಡೆಯುತ್ತಿದ್ದಂತೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಿದರು. ಇದರಿಂದಾಗಿ ಹೆಚ್ಚಿನ ಅನಾಹುತ ನಡೆಯಲಿಲ್ಲ.
ಶಾಂತಿ ಕದಡುವ ಇಂತಹ ಘಟನೆಗಳು ನಗರದಲ್ಲಿ ಆಗಾಗ ನಡೆಯುತ್ತಿದ್ದು, ಕಳೆದ ವರ್ಷವೂ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಗಲಭೆ ನಡೆಸಲಾಗಿತ್ತು. ಈಗಲೂ ಅಧಿವೇಶನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಂತಹುದೇ ಪ್ರಯತ್ನ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ.
ಆ ಪ್ರದೇಶದ ಮನೆಗಳಲ್ಲಿ ಕಲ್ಲು ಹಾಗೂ ಬಾಟಲಿಗಳನ್ನು ಶೇಖರಿಸಿರುವ ಶಂಕೆ ಇದ್ದು, ಮನೆ ಮನೆ ಶೋಧ ನಡೆಸಬೇಕೆನ್ನುವ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ