Latest

ಬೆಳಗಾವಿ ಅಧಿವೇಶನದ ವೇಳೆ 46 ಸಂಘಟನೆಗಳ ಪ್ರತಿಭಟನೆ


    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಅಧಿವೇಶನ ಕಾಲಕ್ಕೆ ಪ್ರತಿಭಟನೆ ನಡೆಸಲು ಕೋರಿ ಭಾನುವಾರದವರೆಗೆ 46 ಸಂಘಟನೆಗಳು ಮನವಿ ಸಲ್ಲಿಸಿವೆ.
ಅನುಮತಿ ಪಡದು ಪ್ರತಿಭಟನೆ ನಡೆಸುವವರಿಗೆ 250ರ 4, 500ರ 2 ಹಾಗೂ 1000 ಜನ ಕುಳಿತುಕೊಳ್ಳುವ 2 ಮತ್ತು 5000 ಸಾಮರ್ಥ್ಯದ ಒಂದು ಹೀಗೆ ಒಟ್ಟು 9 ಟೆಂಟ್ ಗಳನ್ನು ನಿರ್ಮಿಸಿದ್ದು, ಅದರೊಂದಿಗೆ 5000ಕ್ಕಿಂತ ಹೆಚ್ಚಿನ ಜನ ಸೇರಿ ಪ್ರತಿಭಟನೆ ನಡೆಸುವವರಿಗೆ ಕೊಂಡಸ್‌ಕೊಪ್ಪದ ಖುಲ್ಲಾ ಜಾಗದಲ್ಲಿ ಕುಳಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಇಲ್ಲಿಯವರೆಗೆ ಒಟ್ಟು 46 ಪ್ರತಿಭಟನೆಗಾಗಿ ಅರ್ಜಿಗಳು ಹಾಗೂ ಮನವಿ ಸಲ್ಲಿಸಲು ಸುಮಾರು 12 ಜನರು ಅನುಮತಿ ಕೋರಿದ್ದಾರೆ.

ಮೊದಲ ದಿನವಾದ ಸೋಮವಾರ ಭೀಮಶಿ ಗದಾಡಿ ಕಾರ್ಯಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಳಗಾವಿ (ಕೋಡಿಹಳ್ಳಿ ಚಂದ್ರಶೇಖರ ಬಣ) ಸುಮಾರು 2000 ಮೇಲ್ಪಟ್ಟು ಜನ ಸೇರಿ ಬೆಳಗಾವಿ ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಾಗೂ ತಾಲೂಕಾ ಆಸ್ಪತ್ರೆಗಳಲ್ಲಿ ಸಮರ್ಪಕ ವೈದ್ಯರಿಲ್ಲದೇ ರೋಗಿಗಳು ಪರದಾಡುವ ಸ್ಥಿತಿ ಇದ್ದು ಅದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಸಿ ಪ್ರತಿಭಟನೆ ಕೈಗೊಳ್ಳುವುದಾಗಿ ಮನವಿ ಮಾಡಿದ್ದು, ಅವರಿಗೆ ಕೊಂಡಸ್ ಕೊಪ್ಪದಲ್ಲಿ ಸ್ಥಳವಕಾಶವನ್ನು ನೀಡಲಾಗಿದೆ.

ಭಾರತೀಯ ಜನತಾ ಪಾರ್ಟಿಯ ಮಹಾನಗರ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಹರಕುಣಿ, ತಮ್ಮ ಕಾರ್ಯಕರ್ತರೊಂದಿಗೆ ಭಾರತೀಯ ಜನತಾ ಪಾರ್ಟಿ ಕರ್ನಾಟಕ ರೈತ ಮೋರ್ಚಾ ವತಿಯಿಂದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲು ಅನುಮತಿ ಪಡೆದುಕೊಂಡಿದ್ದಾರೆ.

ಪ್ರತಿಭಟನೆಗೆ ಅನುಮತಿ ಪಡೆದವರ ವಿವರ ಹೀಗಿದೆ:

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button