ಬೆಳಗಾವಿಯಲ್ಲಿದ್ದಾಗ ಸಂಗೀತವನ್ನೂ ಕಲಿಯುತ್ತಿದ್ದ ತೇಜಸ್ವಿ
ಪ್ರಗತಿವಾಹಿನಿ ಎಕ್ಸಕ್ಲೂಸಿವ್
ಎಂ.ಕೆ.ಹೆಗಡೆ, ಬೆಳಗಾವಿ
ಪ್ರಖರ ವಾಘ್ಮಿ, ಕೇಸರಿ ಪಡೆಯ ಯುವ ನಾಯಕ, ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ತೇಜಸ್ವಿ ಸೂರ್ಯ ಬೆಳಗಾವಿಯಲ್ಲಿ ಓದಿದ್ದಾರೆ.
2000ನೇ ಇಸ್ವಿಯಿಂದ 2003ರ ವರೆಗೆ ಬೆಳಗಾವಿಯ ನೆಲದಲ್ಲಿ ತಮ್ಮ ಬಾಲ್ಯ ಕಳೆದಿರುವ ತೇಜಸ್ವಿ ಸೂರ್ಯ, ಇಲ್ಲೇ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. 3 ರಿಂದ 6ನೇ ತರಗತಿಯವರೆಗೆ ಬೆಳಗಾವಿಯ ಸೇಂಟ್ ಫಾಲ್ಸ್ ಶಾಲೆಯಲ್ಲಿ ಓದಿರುವ ತೇಜಸ್ವಿ ನಂತರ ಬೆಂಗಳೂರಿಗೆ ತೆರಳಿ ಶಿಕ್ಷಣ ಮುಂದುವರಿಸಿದ್ದಾರೆ.
”ಸಂಗೀತ ಕಲಿಯುವ ವೇಳೆ ಇಲ್ಲಿಗೆ ಆಗಮಿಸಿದ್ದ ಜ್ಯೋತಿಷಿಯೋಬ್ಬರು ಸ್ವಯಂ ಪ್ರೇರಿತರಾಗಿ ತೇಜಸ್ವಿ ಮುಖವನ್ನು ನೋಡಿ, ಈ ಹುಡುಗ ದೇಶದ ಪ್ರಧಾನಿಯಾಗುತ್ತಾನೆ ಎಂದಿದ್ದರು”
-ರೇಖಾ ಹೆಗಡೆ, ಶಾಂತಲಾ ನಾಟ್ಯಾಲಯ, ಬೆಳಗಾವಿ
ತೇಜಸ್ವಿ ತಂದೆ ಡಾ.ಎಲ್.ಎ.ಸೂರ್ಯನಾರಾಯಣ ರಾಜ್ಯ ಅಬಕಾರಿ ಇಲಾಖೆಯಲ್ಲಿ ಆಯುಕ್ತರಾಗಿದ್ದವರು. 2003ರಲ್ಲಿ ಅವರಿಗೆ ಬೆಳಗಾವಿಗೆ ವರ್ಗಾವಣೆಯಾಗಿತ್ತು. ಹಾಗಾಗಿ ತೇಜಸ್ವಿ ಕೂಡ ತಂದೆ ಸೂರ್ಯನಾರಾಯಣ ಹಾಗೂ ತಾಯಿ ರಮಾ ಅವರೊಂದಿಗೆ ಬೆಳಗಾವಿಯಲ್ಲಿ ವಾಸವಾಗಿದ್ದರು.
3 ವರ್ಷ ಬೆಳಗಾವಿಯಲ್ಲಿ ಆಡಿ ಬೆಳೆದಿರುವ ಅವರು, ಇಲ್ಲಿಯ ಶಾಂತಲಾ ನಾಟ್ಯಾಲಯದಲ್ಲಿ ಸಂಗೀತವನ್ನೂ ಕಲಿಯುತ್ತಿದ್ದರು. ಶಾಂತಲಾ ನಾಟ್ಯಾಲಯದ ಶಿಕ್ಷಕಿ ರೇಖಾ ಹೆಗಡೆ ತೇಜಸ್ವಿಗೆ ಸಂಗೀತ ಕಲಿಸುತ್ತಿದ್ದರು.
ಒಂದು ದಿನ ತೇಜಸ್ವಿ ಸಂಗೀತ ಕಲಿಯಲು ಬಂದ ವೇಳೆ ಶಾಂತಲಾ ನಾಟ್ಯಾಲಯಕ್ಕೆ ಆಗಮಿಸಿದ್ದ ಜ್ಯೋತಿಷಿ ಒಬ್ಬರು, ತೇಜಸ್ವಿ ಮುಖ ನೋಡಿ, ಈ ಹುಡುಗ ಭಾರತದ ಪ್ರಧಾನಿಯಾಗುತ್ತಾನೆ ಎಂದಿದ್ದರಂತೆ!
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ