Latest

ಬೆಳಗಾವಿ: ಪಿಯುಸಿ ಪರೀಕ್ಷಾರ್ಥಿಗಳೇ ನಾಳೆ ಪರೀಕ್ಷಾಕೇಂದ್ರಕ್ಕೆ ಬೇಗ ತಲುಪಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಪಿಯುಸಿ ಪರೀಕ್ಷೆ ಬರೆಯುತ್ತಿರುವ ಬೆಳಗಾವಿ ನಗರದ ವಿದ್ಯಾರ್ಥಿಗಳೇ ಸೋಮವಾರ ನೀವು ನಿಮ್ಮ ಪರೀಕ್ಷೆ ಕೇಂದ್ರಕ್ಕೆ ಬೇಗ ತಲುಪಬೇಕು. ಇಲ್ಲವಾದಲ್ಲಿ ಪರೀಕ್ಷೆಯೇ ಮಿಸ್ ಆಗಬಹುದು.

ಸೋಮವಾರ ಬೆಳಗಾವಿ ನಗರಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬರುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಂಚಾರ ನಿಷೇಧಿಸಲಾಗುತ್ತಿದೆ.

ಸೋಮವಾರ ಬೆಳಗಾವಿ ನಗರ ಸಂಚಾರದಲ್ಲಿ ಭಾರೀ ಬದಲಾವಣೆ

ಹಾಗಾಗಿ ಬೆಳಗ್ಗೆ 8.30ರೊಳಗೆ ಪರೀಕ್ಷಾ ಕೇಂದ್ರ ತಲುಪುವಂತೆ ವಿದ್ಯಾರ್ಥಿಗಳು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪೊಲೀಸರು ಕೋರಿದ್ದಾರೆ. ಪರೀಕ್ಷೆ 10.30ಕ್ಕೆ ಆರಂಭವಾಗಲಿದೆಯಾದರೂ ವಿದ್ಯಾರ್ಥಿಗಳು ಮಾತ್ರ 2 ಗಂಟೆ ಮುಂಚಿತವಾಗಿ ಹೋಗಬೇಕಾಗಿದೆ.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಹಾಗೂ ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button