Latest

ಬೆಳಗಾವಿ ಲೋಕಸಭಾ ಕ್ಷೇತ್ರ: ಇಂದು 20 ನಾಮಪತ್ರ ಸಲ್ಲಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಲೋಕಸಭಾ ಚುನಾವಣೆಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ  ಹತ್ತೊಂಭತ್ತು ಅಭ್ಯರ್ಥಿಗಳು ಬುಧವಾರ ಒಟ್ಟು ೨೦ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಓಂಕಾರಸಿಂಗ್ ಚಾತ್ರಾಸಿಂಗ್ ಭಾಟಿಯಾ, ಗುರುಪುತ್ರ ಕೆಪ್ಪಣ್ಣಾ ಕುಳ್ಳೂರ, ಶಂಕರ ಪಾಂಡಪ್ಪಾ ರಾಠೋಡ, ವಿಜಯ ಲಕ್ಷಣ ಪಾಟೀಲ, ಬುಲಂದ ದೀಪಕ ದಳವಿ, ಉದಯ ರಾಮಪ್ಪ ಕುಂದರಗಿ, ಶಿವರಾಯ ನಾರಾಯಣ ಪಾಟೀಲ, ಧನಂಜಯ ರಾಜಾರಾಮ ಪಾಟೀಲ, ಶುಭಂ ವಿಕ್ರಾಂತ ಶಿಲ್ಕೆ, ವಿನಾಯಕ ಬಾಲಕೃಷ್ಣ ಮೋರೆ, ಪಾಂಡುರಂಗ ಮಲ್ಲಪ್ಪ ಪಟ್ಟಣ, ಲಕ್ಷ್ಮಣ ಭೀಮರಾವ್ ದಳವಿ, ಚೇತಕಕುಮಾರ ಯಲ್ಲಪ್ಪ ಕಾಂಬಳೆ, ಮಹಾದೇವ ಮಾರುತಿ ಮಂಗನಕರ್, ಗಣೇಶ ಮಹೇಶ ದಡ್ಡಿಕರ್, ಉದಯ ತುಕ್ಕಾರಾಮ ನಾಯ್ಕ, ಅನಿಲ ಬಾಬಣ್ಣ ಹೆಗಡೆ ಅವರು ತಲಾ ಒಂದು ಸೆಟ್ ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮೇಘರಾಜ ಶಿವಗೌಡರ ಖಾನಗೌಡರ ಅವರು ಎರಡು ಸೆಟ್ ನಾಮಪತ್ರಗಳನ್ನು ಹಾಗೂ ಸರ್ವ ಜನತಾ ಪಕ್ಷದ ಅಭ್ಯರ್ಥಿಯಾಗಿ ಅಶೋಕ ಪಾಂಡಪ್ಪಾ ಹಂಜಿ ಅವರು ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಅಪರ ಜಿಲ್ಲಾ ಚುನಾವಣಾಧಿಕಾರಿ ಡಾ.ಬೂದೆಪ್ಪ ಎಚ್.ಬಿ. ನಾಮಪತ್ರಗಳನ್ನು ಸ್ವೀಕರಿಸಿದರು.
ಇವರಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ 16 ಜನರು ಸೇರಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button