Latest

ಭಾನುವಾರ ಹೆಬ್ಬಾಳಕರ್ ಜನ್ಮದಿನ, ಸಾಧಕರಿಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಮೈಸೂರು ಮಿನರಲ್ಸ್ ಚೇರಮನ್ ಲಕ್ಷ್ಮಿ ಹೆಬ್ಬಾಳಕರ್ ಜನ್ಮದಿನದ ನಿಮಿತ್ತ ಭಾನುವಾರ ಭವ್ಯ ಸಮಾರಂಭ ಏರ್ಪಡಿಸಲಾಗಿದೆ. 

ಸಂಜೆ 6 ಗಂಟೆಗೆ ಬೆಳಗಾಂ ಕ್ಲಬ್ ಆವರಣದಲ್ಲಿ ಸಮಾರಂಭ ನಡೆಯಲಿದ್ದು, ಗ್ರಾಮೀಣ ಕ್ಷೇತ್ರದ ಎಸ್ಎಸ್ಎಲ್ ಸಿ ಸಾಧಕ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. 
ಲಕ್ಷ್ಮಿ ಹೆಬ್ಬಾಳಕರ್ ಅವರ ಅಭಿಮಾನಿ ಬಳಗದಿಂದ ಸಂಘಟಿಸಿರುವ ಈ ಸಮಾರಂಭದಲ್ಲಿ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. 
ಕಳೆದ ವರ್ಷ ತಮ್ಮ ಜನ್ಮ ದಿನದ ನಿಮಿತ್ಯ ಲಕ್ಷ್ಮಿ ಹೆಬ್ಬಾಳಕರ್ ಗ್ರಾಮೀಣ ಕ್ಷೇತ್ರದ ಸಾವಿರಾರು ಸೈನಿಕರನ್ನು ಸನ್ಮಾನಿಸಿದ್ದರು. 
ಲಕ್ಷ್ಮಿ ಹೆಬ್ಬಾಳಕರ್ ಅವರ ಜನ್ಮ ದಿನ ಫೆ.14. ಆದರೆ ಕಳೆದ ವರ್ಷ ಮೇ 12ರಂದು ಮತದಾರರು ತಮ್ಮನ್ನು ವಿಧಾನಸಭೆಗೆ ಆರಿಸಿ ಕಳಿಸಿದ್ದರಿಂದ ಅವರ ಗೌರವಾರ್ಥ ಮೇ 12ರಂದೇ ತಮ್ಮ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. 
ಕಳೆದ ಒಂದು ವರ್ಷದಲ್ಲಿ ಗ್ರಾಮೀಣ ಕ್ಷೇತ್ರದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿರುವ ಹೆಬ್ಬಾಳಕರ್ ಕ್ಷೇತ್ರದ ಜನ ಪ್ರೀತಿಗೆ ಪಾತ್ರರಾಗಿದ್ದಾರೆ. ಹಾಗಾಗಿ ಅವರ ಅಭಿಮಾನಿಗಳು ಭಾನುವಾರ ಸಂಜೆ ಅವರನ್ನು ಸನ್ಮಾನಿಸಿ ಉಪಕಾರ ಸ್ಮರಿಸಲಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button